ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತಗುಣಕಿ ಗ್ರಾಮದಲ್ಲಿ ಮತದಾನ ವಿಳಂಬ

Last Updated 13 ಮೇ 2018, 8:52 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಭತಗುಣಕಿ ಗ್ರಾಮದ ಮತಗಟ್ಟೆಯೊಂದರಲ್ಲಿ ಮತಪೆಟ್ಟಿಗೆಯ ತೊಂದರೆಯಿಂದ ಸುಮಾರು 1 ಗಂಟೆ 40 ನಿಮಿಷ ತಡವಾಗಿ ಮತದಾನ ಕಾರ್ಯ ಪ್ರಾರಂಭವಾಗಿದೆ. ಅದರಂತೆ ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿರುವ ಮತಗಟ್ಟೆ, ತಾಲ್ಲೂಕಿನ ಬುಗುಟಗೇರಿ ಎಲ್.ಟಿ. ಯಲ್ಲಿ ಮತಪೆಟ್ಟಿಗೆಯ ತೊಂದರೆಯಿಂದ ಸುಮಾರು 30 ನಿಮಿಷಗಳ ಕಾಲ ತಡವಾಗಿ ಮತದಾನ ಪ್ರಾರಂಭವಾಗಿರುವುದನ್ನು ಬಿಟ್ಟರೆ ತಾಲ್ಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ವೇಳೆಗನುಗುಣವಾಗಿ ಮತದಾನ ಪ್ರಾರಂಭವಾಗಿದೆ. ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಚುನಾವಣಾ ಅಧಿಕಾರಿ ಡಾ.ಪಿ.ರಾಜ್ ತಿಳಿಸಿದ್ದಾರೆ.

ಬೆಳಿಗ್ಗೆ 10 ಗಂಟೆಯವರೆಗೆ ಹೆಚ್ಚಿನ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರೆ, ಮಧ್ಯಾಹ್ನ ವೇಳೆಗೆ ಕಡಿಮೆ ಮತದಾರರು ಮತ ಚಲಾಯಿಸಿದರು. ಮತ್ತೆ 4 ಗಂಟೆಯಿಂದ 6 ಗಂಟೆಯವರೆಗೆ ಮತದಾರರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. 5 ಗಂಟೆಗೆ ಶೇ 60ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ. ತಾಲ್ಲೂಕಿನ ಬಹುತೇಕ ಮತದಾನ ಕೇಂದ್ರಗಳ ಮುಂದೆ ವಿವಿಧ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯ ಮತದಾನ ಮಾಡಿಸುವಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT