ಶಿವಕುಮಾರ ಸ್ವಾಮೀಜಿಗೆ ‘ಶಿವಪಂಚಾಕ್ಷರಿ’ ಉಸಿರಾಟದಷ್ಟೇ ಸಹಜ, ‘ರುದ್ರ’ವೂ ಹೃದ್ಯ

7

ಶಿವಕುಮಾರ ಸ್ವಾಮೀಜಿಗೆ ‘ಶಿವಪಂಚಾಕ್ಷರಿ’ ಉಸಿರಾಟದಷ್ಟೇ ಸಹಜ, ‘ರುದ್ರ’ವೂ ಹೃದ್ಯ

Published:
Updated:

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸುಧಾರಿಸಿದೆ. ‘ಓಂ ನಮಃ ಶಿವಾಯ’ ಎಂದು ಶಿವಪಂಚಾಕ್ಷರಿ ಮಂತ್ರವವನ್ನು ಸತತ ಪಠಿಸುವ ಸ್ವಾಮೀಜಿ ಬುಧವಾರ ಬೆಳಿಗ್ಗೆ ಚಿಕಿತ್ಸಾ ಕೊಠಡಿಯಲ್ಲಿಯೇ ರುದ್ರ ಸೂಕ್ತದಲ್ಲಿರುವ ಇಷ್ಟಲಿಂಗ ಪೂಜೆಯ ಮಂತ್ರಗಳನ್ನೂ ಪಠಿಸಿದರು.

ಸ್ಚಾಮೀಜಿ ಅವರ ಆರೈಕೆಯಲ್ಲಿರುವ ಮಠದ ಸಿಬ್ಬಂದಿ ಮಾತಿಗೆ ಸ್ಪಂದಿಸುತ್ತಾ ದನಿಗೂಡಿಸಿ ಮಂತ್ರಪಠಣ ಮಾಡಿದರು. ಸ್ವಾಮೀಜಿ ಮಂತ್ರಪಠಿಸುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಮಠದ ಸಿಬ್ಬಂದಿ ಹಳೇ ಮಠದ ಹೊರಗಡೆ ಇದ್ದ ಭಕ್ತರಿಗೆ ತೋರಿಸಿದರು.
ಸ್ವಾಮೀಜಿ ಅವರು ಮಂತ್ರ ಪಠಿಸುವ ದೃಶ್ಯ ಕಂಡ ಭಕ್ತರು ಪುಳಕಿತಗೊಂಡರು. ನಿರಾತಂಕದಿಂದ ದೇವರಿಗೆ ನಮಿಸಿದರು.

ಸಂಜೆ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ, ಜಯದೇವ ಆಸ್ಪತ್ರೆಯ ಡಾ.ನಾಗೇಶ್ ಅವರು ಸ್ವಾಮೀಜಿ ಆರೋಗ್ಯ ತಪಾಸಣೆ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ರವೀಂದ್ರ, ‘ಸ್ವಾಮೀಜಿ ಆರೋಗ್ಯ ಸ್ಥಿರವಾಗಿದೆ. ಆದರೆ, ಸೋಂಕು ಇನ್ನೂ ಕಡಿಮೆ ಆಗಿಲ್ಲ. ಪ್ರೊಟೀನ್ ಅಂಶ ಕಡಿಮೆ ಇರುವುದರಿಂದ ಶ್ವಾಸಕೋಶದಲ್ಲಿ ನೀರು ಸೇರಿಕೊಳ್ಳುತ್ತಿದ್ದು, ಈ ನೀರನ್ನು ತೆಗೆಯಲಾಗುತ್ತಿದೆ. ನಾಡಿ ಮಿಡಿತ (ಪಲ್ಸ್), ರಕ್ತದೊತ್ತಡ (ಬಿ.ಪಿ) ಸಾಮಾನ್ಯವಾಗಿದೆ. ರೋಗ ನಿರೋಧಕ ಔಷಧಿಯನ್ನು ಕೊಡಲಾಗುತ್ತಿದೆ. ದ್ರವರೂಪದ ಆಹಾರ ಕೊಡುವುದನ್ನು ಮುಂದುವರಿಸಲಾಗಿದೆ’ ಎಂದು ಹೇಳಿದರು.

ಗಣ್ಯರ ಭೇಟಿ: ಸ್ವಾಮೀಜಿಯವರನ್ನು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ, ಮಾಜಿ ಸಚಿವ ‍ಪಿ.ಜಿ.ಆರ್.ಸಿಂಧ್ಯಾ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರು ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !