ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ, ಭಕ್ತರು ಮಠದತ್ತ ಬರುವುದು ಬೇಡ: ಡಾ.ಪರಮೇಶ್

ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ಡಾ.ಪರಮೇಶ್ ಹೇಳಿದರು.
ಆರೋಗ್ಯ ಚೇತರಿಕೆಗೆ ಎಲ್ಲ ಪ್ರಯತ್ನ ಮುಂದುವರಿದಿದೆ. ಬೆಂಗಳೂರಿನಿಂದಲೂ ವೈದ್ಯರ ತಂಡ ಚಿಕಿತ್ಸೆ ನೀಡಲು ಬರುತ್ತಿದೆ. ಬೆಳಿಗ್ಗೆ ಇದ್ದ ಸ್ಥಿತಿಗೆ ಹೋಲಿಸಿದರೆ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದರು.
ಭಕ್ತರು ಸ್ವಾಮೀಜಿ ಆರೋಗ್ಯದ ಬಗ್ಗೆ ಆತಂಕಪಡಬೇಕಿಲ್ಲ. ಸ್ವಾಮೀಜಿ ದರ್ಶನಕ್ಕೆ ಭಕ್ತರು ಬರುವುದು ಬೇಡ. ತಾವೆಲ್ಲಿದ್ದಾರೊ ಅಲ್ಲಿಂದಲೇ ಸ್ವಾಮೀಜಿ ಆರೋಗ್ಯ ಚೇತರಿಕೆಗೆ ಪ್ರಾರ್ಥನೆ ಮಾಡಲಿ ಎಂದರು.
ಬರಹ ಇಷ್ಟವಾಯಿತೆ?
1
0
0
0
2
0 comments
View All