ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿ ನೇಮಕ: ಸ್ಥಳೀಯರಿಂದ ಮುರುಘಾ ಶರಣರಿಗೆ ಅಡ್ಡಿ

Last Updated 10 ಜೂನ್ 2022, 19:32 IST
ಅಕ್ಷರ ಗಾತ್ರ

ಕೊರಟಗೆರೆ (ತುಮಕೂರು ಜಿಲ್ಲೆ): ಗ್ರಾಮಸ್ಥರ ವಿರೋಧದ ನಡುವೆಯೇ ತಾಲ್ಲೂಕಿನ ಹೊಳವನಹಳ್ಳಿ ಸಮೀಪದ ಪುಟ್ಟೇಶ್ವರಸ್ವಾಮಿ ಗದ್ದುಗೆ ದೊಡ್ಡ ಮಠಕ್ಕೆ ಶುಕ್ರವಾರ ನೂತನ ಸ್ವಾಮೀಜಿಯನ್ನು ನೇಮಿಸಲಾಯಿತು.

ಸ್ವಾಮೀಜಿಯನ್ನು ನೇಮಿಸಲು ಬಂದಿದ್ದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಸ್ಥಳೀಯರು ಅಡ್ಡಿಪಡಿಸಿದರು. ಈ ವಿರೋಧದ ನಡುವೆಯೇ ಬಸವಕಿರಣ ಸ್ವಾಮೀಜಿಯನ್ನು ಪೀಠಾಧ್ಯಕ್ಷರನ್ನಾಗಿ ಮುರುಘಾ ಶರಣರು ಘೋಷಿಸಿದರು.

ಮಠದಲ್ಲಿ ಈ ಹಿಂದೆ ಇದ್ದ ಸೋಮೇಶ್ವರ ಸ್ವಾಮೀಜಿಯ ಪಟ್ಟಾ ಧಿಕಾರ ನಡೆದಿರಲಿಲ್ಲ. ಸ್ವಯಂ ನಿವೃತ್ತಿ ಘೋಷಿಸಿ ಮಠದ ಆಸ್ತಿಯನ್ನು ಸ್ಥಳೀಯರ ಗಮನಕ್ಕೆ ತರದೇ ಗೋಪ್ಯವಾಗಿ ಮುರುಘಾ ಮಠಕ್ಕೆ ಬರೆದುಕೊಟ್ಟಿದ್ದಾರೆ. ಅವರಿಗೆ ಆಸ್ತಿ ಬರೆದುಕೊಡಲು ಹಕ್ಕಿಲ್ಲ ಎಂದು ಸ್ಥಳೀಯರು ಆಕ್ಷೇಪಿಸಿದರು.

‘ಮಠದ ವಿಚಾರವಾಗಿ ಎಲ್ಲಾ ದಾಖಲೆಗಳಿವೆ. ಏನೇ ವಿವಾದ ಇದ್ದರೂ ಮಾತುಕತೆಗೆ ಸಿದ್ಧ. ಜಗಳವಾಡಲು ಬಂದರೆ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಮುರುಘಾ ಮಠದ ಶಿವಮೂರ್ತಿ ಶರಣರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT