ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಂಗ ಕಸಿ: 11 ರೋಗಿಗಳಿಗೆ ಜೀವದಾನ

Last Updated 24 ಮೇ 2018, 19:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸ್ಪರ್ಶ್‌ ಆಸ್ಪತ್ರೆಯಲ್ಲಿ ಮೇ ತಿಂಗಳಿನಲ್ಲಿ ಅಂಗಾಂಗ ಕಸಿಯ ಮೂಲಕ ಒಟ್ಟು 11 ಮಂದಿಗೆ ಜೀವದಾನ ಮಾಡಲಾಗಿದೆ.

ಡಾ.ಶರಣ್ ಪಾಟೀಲ್ ಅವರ ತಂಡ ಅಂಗಾಂಗ ಕಸಿ ಮಾಡುವುದರಲ್ಲಿ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳ್ಳೂರು ಕ್ರಾಸ್‌ ಬಳಿ ನಡೆದ ಅಪಘಾತದಲ್ಲಿ ನಗರ ವಾಸಿ ಚಂದ್ರು ಅವರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರ ಮಿದುಳು ನಿಷ್ಕ್ರಿಯಗೊಂಡಿತು. ಕುಟುಂಬದವರ ಅನುಮತಿ ಪಡೆದು ಅವರ ಯಕೃತ್‌, ಎರಡು ಮೂತ್ರಪಿಂಡ, ನಾಲ್ಕು ಹೃದಯ ಕವಾಟಗಳನ್ನು ಅಂಗಾಂಗ ಕಸಿ ಮೂಲಕ ಏಳು ಜನರಿಗೆ ದಾನ ಮಾಡಲಾಗಿದೆ.

21 ವರ್ಷದ ವಿದ್ಯಾರ್ಥಿ ವರುಣ್‌ ಕೂಡ ಅಪಘಾತಕ್ಕೆ ಒಳಗಾಗಿದ್ದರು. ಅವರ ಕಿಡ್ನಿ, ಯಕೃತ್‌ ಮತ್ತು ಹೃದಯವನ್ನು ಹೊರತೆಗೆಯಲಾಯಿತು. ಅದೇ ದಿನ ಯಕೃತ್‌ ಮತ್ತು ಎರಡು ಕಿಡ್ನಿಗಳನ್ನು ಸ್ಪರ್ಶ್‌ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಕಸಿ ಮಾಡಲಾಯಿತು. ಹೃದಯವನ್ನು ಕೋಲ್ಕತ್ತಕ್ಕೆ ಕಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT