ಪಾವಗಡ: ಬೆಂಗಳೂರಿನ ಯಲಹಂಕ ನ್ಯೂಟೌನ್ ಬೃಂದಾವನ ಬಡಾವಣೆಯ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಶ್ರುತಿ (24) ಅಂತ್ಯಕ್ರಿಯೆ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.

ಪಾವಗಡ ತಾಲ್ಲೂಕಿನ ಬೂಪೂರು ತಾಂಡಾಕ್ಕೆ ಮಂಗಳವಾರ ಶ್ರುತಿ ಶವದೊಂದಿಗೆ ಬಂದ ಆಕೆಯ ತಂದೆ ರಾಜು ನಾಯ್ಕ, ತಮ್ಮ ಅಳಿಯ ಪವನ್ ಕಲ್ಯಾಣ್ ಕಟ್ಟಿಸುತ್ತಿದ್ದ ಮನೆಯ ಆವರಣದಲ್ಲಿಯೇ ಅಂತ್ಯಕ್ರಿಯೆ ನಡೆಸಿದರು.

ಸುದ್ದಿ ಸ್ಥಳಕ್ಕೆ ಬಂದ ಪೊಲೀಸರು, ಮನೆ ಆವರಣದಲ್ಲಿ ಅಂತ್ಯಕ್ರಿಯೆ ಮಾಡುವುದರಿಂದ ಕಾನೂನು ಸಮಸ್ಯೆಯಾಗಲಿದೆ ಎಂದು ಹೇಳಿ ಮೃತದೇಹ ಹೊರ ತೆಗೆಯುವಂತೆ ಮನವೊಲಿಸಿದರು. ನಂತರ ಮನೆ ಆವರಣದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದು ಪವನ್ ಕಲ್ಯಾಣ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

‘ನನ್ನ ಮಗಳು ಅನ್ಯಾಯವಾಗಿ ಮೃತಪಟ್ಟಿದ್ದಾಳೆ. ಅಳಿಯ ಮನೆ ನಿರ್ಮಿಸಲು ನಾನು ₹10 ಲಕ್ಷ ನೀಡಿದ್ದೆ. ಹೀಗಾಗಿ ಮನೆಯಲ್ಲಿ ಅಂತ್ಯಕ್ರಿಯೆ ಮಾಡಿದೆ. ಅಂತ್ಯಕ್ರಿಯೆ ಸ್ಥಳದಲ್ಲಿ ದೇಗುಲ ನಿರ್ಮಿಸುವ ಸಲುವಾಗಿ ಹೀಗೆ ಮಾಡಿದೆ’ ಎಂದು ಶ್ರುತಿ ತಂದೆ ರಾಜು ನಾಯ್ಕ ಪ್ರತಿಕ್ರಿಯಿಸಿದರು.

ಪಾವಗಡ ತಾಲ್ಲೂಕಿನ ಶ್ರುತಿ ಅವರು ತಮ್ಮದೇ ಊರಿನ ಪವನ್ ಕಲ್ಯಾಣ್ ಅವರನ್ನು 2024ರ ಡಿಸೆಂಬರ್ನಲ್ಲಿ ಮದುವೆಯಾಗಿದ್ದರು. ದಂಪತಿ ಬೆಂಗಳೂರಿನ ಬೃಂದಾವನ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

‘ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯ ಸಾವಿನ ಬಗ್ಗೆ ಅನುಮಾನವಿದೆ. ಪವನ್ ಮತ್ತು ಪೋಷಕರು ವರದಕ್ಷಿಣೆ ಹಣಕ್ಕಾಗಿ ಮಗಳನ್ನು ಕೊಲೆ ಮಾಡಿದ್ದಾರೆ. ಶ್ರುತಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಲಾಗಿದೆ’ ಎಂದು ಶ್ರುತಿ ಪೋಷಕರು ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.