ಬುಧವಾರ, ನವೆಂಬರ್ 13, 2019
21 °C

ಲೋಕ ಅದಾಲತ್: 159 ವ್ಯಾಜ್ಯ ಇತ್ಯರ್ಥ

Published:
Updated:
Prajavani

ಶಿಡ್ಲಘಟ್ಟ: ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 555 ಪ್ರಕರಣಗಳ ಪೈಕಿ 159 ವಿವಾದ ಪೂರ್ವ ವ್ಯಾಜ್ಯಗಳು ಇತ್ಯರ್ಥವಾಗಿವೆ.

ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು, ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ವಿವಿಧ ರೀತಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.

ಅದಾಲತ್‌ನಲ್ಲಿ ಸುಮಾರು 139 ಕ್ರಿಮಿನಲ್ ಪ್ರಕರಣಗಳೂ ಸೇರಿದಂತೆ 20 ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಈ ಪೈಕಿ 14 ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಒಟ್ಟು ₹ 26.54 ಲಕ್ಷ ಹಣ ಪಾವತಿಸಲು ಅದಾಲತ್‌ನಲ್ಲಿ ಸೂಚಿಸಲಾಯಿತು.

ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ ಪಚ್ಚಾಪುರೆ, ಸಿವಿಲ್ ನ್ಯಾಯಾಧೀಶರಾದ ಡಿ.ರೋಹಿಣಿ, ಸಂಧಾನಕಾರ ವಕೀಲರಾದ ವಿ.ಸುಬ್ರಹ್ಮಣ್ಯಪ್ಪ, ಜೆ.ವೆಂಕಟೇಶ್, ಆರ್.ವಿ.ವೀಣಾ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ನ್ಯಾಯಾಲಯದ ಶಿರಸ್ತೇದಾರ್ ಮಧುಸೂದನ್, ವಕೀಲರಾದ ವಿ.ಎಂ.ಬೈರಾರೆಡ್ಡಿ, ಎಸ್.ಕೆ.ನಾಗರಾಜ್, ಸಿ.ಜಿ.ಬಾಸ್ಕರ್, ಯೋಗಾನಂದ, ಎಸ್.ಅಶೋಕ್, ಸಿ.ಲಕ್ಷ್ಮಮ್ಮ ಇದ್ದರು.

ಪ್ರತಿಕ್ರಿಯಿಸಿ (+)