ದೇವೇಗೌಡರ ಗೆಲುವಿಗೆ ಒಗ್ಗಟ್ಟಿನ ಶ್ರಮ

ಮಂಗಳವಾರ, ಏಪ್ರಿಲ್ 23, 2019
31 °C
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿಕೆ

ದೇವೇಗೌಡರ ಗೆಲುವಿಗೆ ಒಗ್ಗಟ್ಟಿನ ಶ್ರಮ

Published:
Updated:
Prajavani

ತುಮಕೂರು: ಕೇವಲ ಸಂಸದರ ಆಯ್ಕೆ ಎನ್ನುವ ಬದಲು ದೇಶಕ್ಕೊಬ್ಬ ಸಮರ್ಥ ನಾಯಕ ಬೇಕು ಎನ್ನುವ ಕಾರಣಕ್ಕೆ ತುಮಕೂರು ಕ್ಷೇತ್ರದಿಂದ ದೇವೇಗೌಡ ಅವರನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದರು.

ನಗರದ ಮೈತ್ರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದರು.

ದೇವೇಗೌಡ ಅವರ ಸುಧೀರ್ಘ ರಾಜಕೀಯ ಅವಧಿಯಲ್ಲಿ ಅಧಿಕಾರ ಅನುಭವಿಸಿದ್ದೇ ಕಡಿಮೆ, ನೀರಾವರಿ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ದೇವೇಗೌಡರು ಅಧಿಕಾರ ಮಾಡಿದರು. ಆ ಮೂಲಕ ಎಷ್ಟೋ ಮುಖಂಡರು ರಾಜಕೀಯವಾಗಿ ಬೆಳೆಯಲು ಕಾರಣರಾಗಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.

ಇವರ ಕೈ ಕೆಳಗೆ ಬೆಳೆದವರು ಇವರಿಗಿಂತಾ ಹೆಚ್ಚು ಕಾಲ ಅಧಿಕಾರ ಅನುಭವಿಸಿದ್ದಾರೆ. ದೇವೇಗೌಡ ಅವರು ಅಧಿಕಾರ ಮಾಡಲಿಲ್ಲ ರಾಜ್ಯ, ರಾಷ್ಟ್ರದ ಹಿತಕ್ಕಾಗಿ ಸಾರ್ವರ್ಜನಿಕ ಬದುಕಿನಲ್ಲಿ ತೊಡಗಿಕೊಂಡಿರುವ ಮುತ್ಸದ್ಧಿ ನಾಯಕ. ಕಾವೇರಿ ಸಮಸ್ಯೆ, ರೈಲ್ವೆ ಯೋಜನೆ ಹೀಗೆ ಯಾವುದೇ ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ದೇವೇಗೌಡ ಅವರಿಗಿದೆ ಎಂದು ಹೇಳಿದರು.

ರಾಜ್ಯಕ್ಕೆ ಇಂತಹ ಸಮಸ್ಯೆಗಳು ಎದುರಾದಾಗ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆ ಪಕ್ಷದ ನಾಯಕರು ದೇವೇಗೌಡರ ಸಲಹೆ ಪಡೆದು ಮುಂದುವರೆಯುತ್ತಾರೆ, ದೇವೇಗೌಡರು ಈ ದೇಶದ ದೊಡ್ಡ ಕೊಡುಗೆ ಎಂದರು.

ಭಾರತ ಸರ್ಕಾರ, ಸಂಸತ್ತಿನ ಮೇಲೆ ಪ್ರಭಾವ ಬೀರುವ ಕರ್ನಾಟಕದ ಕೆಲವೇ ನಾಯಕರಲ್ಲಿ ದೇವೇಗೌಡರು ಒಬ್ಬರು, ಮತ್ತೊಬ್ಬರು ಮಲ್ಲಿಕಾರ್ಜುನ ಖರ್ಗೆಯವರು. ಇಂತಹ ನಾಯಕರು ದೇಶದ ಹಿತದೃಷ್ಟಿಯಿಂದ ಪಾರ್ಲಿಮೆಂಟ್‍ಗೆ ಆಯ್ಕೆ ಮಾಡಬೇಕಿದೆ ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಎಚ್‌.ನಿಂಗಪ್ಪ, ಮುಖಂಡ ಹೊನ್ನಗಿರಿಗೌಡ, ಕೆ.ಆರ್.ತಾತಯ್ಯ, ಬೆಳ್ಳಿ ಲೋಕೇಶ್, ಹಾಲನೂರು ಅನಂತಕುಮಾರ್, ಪುರುಷೋತ್ತಮ್, ಲಕ್ಷ್ಮಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !