ಶಿರಾ: ನಿವೇಶನ ನೀಡುವುದಾಗಿ ಬಡಜನರಲ್ಲಿ ಅಸೆ ಮೂಡಿಸುತ್ತಿರುವ ಶಾಸಕ ಟಿ.ಬಿ.ಜಯಚಂದ್ರ ಅವರು ಜನರೊಂದಿಗೆ ಚೆಲ್ಲಾಟ ನಡೆಸುತ್ತಿದ್ದಾರೆಎಂದು ಜೆಡಿಎಸ್ ಮುಖಂಡರು ದೂರಿದರು.

ನಗರದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್.ಉಗ್ರೇಶ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಜೆಡಿಎಸ್ ಅಧ್ಯಕ್ಷ ಬಿ.ಎಸ್.ಪ್ರಕಾಶ್, ಜಿ.ಪಂ ಮಾಜಿ ಉಪಾಧ್ಯಕ್ಷ ಮುಡಿಮಡು ರಂಗಶ್ವಾಮಯ್ಯ ಶಾಸಕರ ವಿರುದ್ಧ ಕಿಡಿಕಾರಿದರು.

ಶಾಸಕ ಟಿ.ಬಿ.ಜಯಚಂದ್ರ 2008ರಿಂದ ನಿವೇಶನ ನೀಡುವುದಾಗಿ ಮೂರು ಬಾರಿ ಅರ್ಜಿಗಳನ್ನು ತೆಗೆದುಕೊಂಡಿದ್ದರೂ ಇದುವರೆಗೂ ಒಂದು ನಿವೇಶನ ನೀಡಲು ಅವರಿಂದ ಸಾಧ್ಯವಾಗಿಲ್ಲ. ಹಿಂದೆ ಬಿ.ಸತ್ಯನಾರಾಯಣ ಹಾಗೂ ಪಿ.ಎಂ.ರಂಗನಾಥಪ್ಪ ಶಾಸಕರಾಗಿದ್ದಾಗ ನಿವೇಶನ ನೀಡಿದ್ದು ಬಿಟ್ಟರೆ ಆನಂತರ ಕೊಟ್ಟಿಲ್ಲ ಎಂದರು.

ಅನೇಕರು ನಿವೇಶನದ ಕನಸು ಕಾಣುತ್ತಿದ್ದಾರೆ. ಶಾಸಕರು ಅವರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ತಿಂಗಳೊಳಗೆ ನಿವೇಶನ ನೀಡದಿದ್ದರೆ ನಗರಸಭೆ ಮುಂದೆ ಜೆಡಿಎಸ್ನಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಕುಸಿದಿದೆ. ಶಾಸಕರು ಕೇವಲ ಅವರ ಹಿಂಬಾಲಕರಿಗೆ ಮಾತ್ರ ಶಾಸಕರು ಎನ್ನುವಂತೆ ವರ್ತಿಸುತ್ತಿದ್ದಾರೆ. ಜನರ ಹಿತ ಕಡೆಗಣಿಸಿದ್ದು, ಶಿರಾಕ್ಕೆ ಬರುವುದೇ ದುಸ್ತರವಾಗಿದೆ. ಮೂರು ವರ್ಷದ ಅವಧಿಯಲ್ಲಿ ಕೇವಲ 200 ದಿನ ಶಿರಾಕ್ಕೆ ಶಾಸಕರು ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮರೆತಿದ್ದಾರೆ. ಗ್ರಾಮೀಣ ಪ್ರದೇಶದ ರಸ್ತೆಗಳನ್ನು ನೋಡುವರೇ ಇಲ್ಲದಂತಾಗಿದೆ ಅಧಿಕಾರಿಗಳು ಯಾರ ಮಾತನ್ನು ಕೇಳುತ್ತಿಲ್ಲ ಎಂದು ಆರೋಪಿಸಿದರು.

ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದರೂ ಕ್ರಮ ತೆಗೆದುಕೊಳ್ಳದ ಸಣ್ಣ ನೀರಾವರಿ ಇಲಾಖೆಯ ಇಬ್ಬರು ಎಂಜಿನಿಯರ್ಗಳನ್ನು ಸರ್ಕಾರ ಅಮಾನತು ಮಾಡಿದ್ದರೆ, ಶಾಸಕರು ಅಧಿಕಾರಿಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು. ಕೆರೆಯಲ್ಲಿ ರೈತರು ಮಣ್ಣು ತೆಗೆಯಲು ಹೋದರೆ ಅವರ ವಿರುದ್ಧ ಅಧಿಕಾರಿಗಳು ಕ್ರಮಕ್ಕೆ ಮುಂದಾಗುವುದು ಖಂಡನೀಯ. ರೈತರಿಗೆ ಕೆರೆಗಳಲ್ಲಿ ಮಣ್ಣು ತೆಗೆದು ತಮ್ಮ ಜಮೀನುಗಳಿಗೆ ಹೊಡೆದುಕೊಳ್ಳಲು ಅವಕಾಶ ನೀಡಬೇಕು ಎಂದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರೆಹಮತ್, ನಗರಸಭೆ ಸದಸ್ಯ ಆರ್.ರಾಮು, ಶ್ರೀರಂಗ, ಬರಗೂರು ಬೋಪಣ್ಣ, ನರಸಿಂಹಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ, ಇನಂಗೋಲ್ಲಹಳಿ ಶಿವಣ್ಣ, ಕೋಟೆ ಮಹದೇವ್ ಗೋಷ್ಠಿಯಲ್ಲಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-17-2013151208

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.