ಸ್ಮಾರ್ಟ್ ಸಿಟಿ ಬಗ್ಗೆ ಗೊಂದಲ ಬೇಡ

7
ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿವೃದ್ಧಿ ಅಭಿಯಾನ

ಸ್ಮಾರ್ಟ್ ಸಿಟಿ ಬಗ್ಗೆ ಗೊಂದಲ ಬೇಡ

Published:
Updated:
Deccan Herald

ತುಮಕೂರು: ಸ್ಮಾರ್ಟ್ ಸಿಟಿ ಬಗ್ಗೆ ಗೊಂದಲಬೇಡ. ಸಮಸ್ಯೆ ಇದ್ದರೆ ಅಧಿಕಾರಗಳ ಜೊತೆಗೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ನಡೆದ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿವೃದ್ಧಿ ಅಭಿಯಾನದಲ್ಲಿ ಮಾತನಾಡಿದರು.

ಸ್ಮಾರ್ಟ್ ಸಿಟಿ ಯೋಜನೆ ಬಂದು ಎರಡು ವರ್ಷಗಳಾಗಿವೆ. ಆದರೂ ನಗರ ಏನು ಅಭಿವೃದ್ಧಿ ಆಗಿಲ್ಲ ಎಂಬ ಗೊಂದಲವಿದ್ದರೆ ಹಾಗೂ ಸ್ಮಾರ್ಟ್ ಸಿಟಿ ಎಂದರೆ ಏನು ಎಂಬುದರ ಬಗ್ಗೆ ಈ ಅಭಿಯಾನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಶೇ 100 ರಷ್ಟು ಬೀದಿದೀಪಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಸಂಜೆ 6.30ರಿಂದ ಬೆಳಿಗ್ಗೆ 6ಗಂಟೆಯವರೆಗೆ ದೀಪಗಳು ಹೊತ್ತಿಕೊಂಡಿರುತ್ತವೆ. ಹೀಗೆ ಸಮಯಕ್ಕೆ ಆನ್ ಮತ್ತು ಆಫ್ ಆಗಲು ಸ್ವಯಂಚಾಲಿಕ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸ್ಮಾರ್ಟ್ ಸಿಟಿ ಅಧಿಕಾರಿ ಸ್ವಾಮಿ ತಿಳಿಸಿದರು.

ಇದರಿಂದ ಶೇ 57ರಷ್ಟು ವಿದ್ಯುತ್ ಉಳಿತಾಯ ಆಗಲಿದೆ. ಈ ಪ್ರಕ್ರಿಯೆ ಈಗಾಗಲೇ ಆಂಧ್ರ ಸೇರಿದಂತೆ ಸುಮಾರು 10 ರಾಜ್ಯದಲ್ಲಿ ಸಂಪೂರ್ಣ ಅನುಷ್ಠಾನಕ್ಕೆ ಬಂದಿದೆ. ಹಾಗಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಎಲ್ಲೆಂದರಲ್ಲಿ ಅನಗತ್ಯವಾಗಿ ಎಲ್ಇಡಿ ದೀಪ, ಹೈಮಾಸ್ಟ್‌, ಸೋಲಾರ್, ಎಲೆಕ್ಟ್ರಿಕಲ್ ದೀಪಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಅಲ್ಲದೆ ಅಧಿಕಾರಿಗಳ ಪರಿಚಯಸ್ಥರು ಇದ್ದರೆ ಅವರು ಹೇಳಿದ ಕಡೆಯಲ್ಲಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಸಭೆಯಲ್ಲಿ ಸಾರ್ವಜನಿಕರು ದೂರಿದರು.

ಇದಕ್ಕೆ ಸ್ಪಂದಿಸಿದ ಪಾಲಿಕೆ ಎಂಜಿನಿಯರ್ ಉದಯ್ ಕುಮಾರ್, ಮುಂದೆ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.

ನಗರದ ನಿವಾಸಿ ರಮೇಶ್ ಮಾತನಾಡಿ, ಬೀದಿ ದೀಪಗಳನ್ನು ಅಳವಡಿಕೆ ಮಾಡುತ್ತಾರೆ. ಆದರೆ ಅವುಗಳ ನಿರ್ವಹಣೆ ಮಾಡುವುದಿಲ್ಲ. ಬೀದಿ ದೀಪಗಳನ್ನು ಯಾವ ಸಮಯದಿಂದ ಎಷ್ಟು ಸಮಯದವರೆಗೆ ಆನ್ ಆಗಿರಬೇಕು. ಯಾವ ಸಮಯದಿಂದ ಆಫ್ ಮಾಡಬೇಕು ಎಂಬುದು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಅಲ್ಲದೆ ಅವುಗಳ ನಿರ್ವಹಣೆಗಾಗಿ ನಿಗದಿತ ಇಂತಿಷ್ಟು ವಾರ್ಡ್ ಗಳನ್ನು ಆಯ್ಕೆ ಮಾಡಿಕೊಂಡು ಆ ವಾರ್ಡ್‌ಗಳಿಗೆ ಪ್ರತ್ಯೇಕ ಸಿಬ್ಬಂದಿಗಳ ನೇಮಕ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಕನ್ನಡ ಭವನ ಮುಂಬದಿಯಲ್ಲಿರುವ ವಿದ್ಯುತ್ ದೀಪ ಸುಮಾರು ನಾಲ್ಕೈದು ತಿಂಗಳಿನಿಂದ ದುರಸ್ತಿಯಲ್ಲಿದೆ. ಅಲ್ಲದೆ ಅಮಾನಿಕೆರೆ ಮುಂಬದಿಯಲ್ಲಿರುವ ಸೋಲಾರ್ ದೀಪವು ದುರಸ್ತಿಯಲ್ಲಿದೆ. ಆದರೂ ದುರಸ್ತಿ ಮಾಡಿಸಿಲ್ಲ ಎಂದು ಆರೋಪಿಸಿದರು.

ಈ ವೇಳೆ ಸಭೆಯಲ್ಲಿ ನೆರದಿದ್ದ ನಗರದ ನಿವಾಸಿಗಳಿಂದ ಲಿಖಿತವಾಗಿ ಸಮಸ್ಯೆಗಳನ್ನು ಪಡೆಯಲಾಯಿತು. ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ಕೆ.ದೊರೈದಾಜು, ಕುಂದರನಹಳ್ಳಿ ರಮೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !