ಸೋಮವಾರ, ಮಾರ್ಚ್ 8, 2021
31 °C
ಸಿದ್ಧಗಂಗಾ ಬಡಾವಣೆಯಲ್ಲಿ ₹ 28 ಲಕ್ಷ ಮೊತ್ತದಲ್ಲಿ ಉದ್ಯಾನ ಅಭಿವೃದ್ಧಿಗೆ ಭೂ ಪೂಜೆ

ಸ್ಮಾರ್ಟ್ ಸಿಟಿ: 47 ಉದ್ಯಾನ ಅಭಿವೃದ್ಧಿಗೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ಸಿದ್ಧಗಂಗಾ ಬಡಾವಣೆಯ ಉದ್ಯಾನವನ್ನು (ಡಾ.ಮುದ್ದರಂಗ ಆಸ್ಪತ್ರೆ ಹತ್ತಿರ) ತುಮಕೂರು ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿಗೊಳಿಸಲು ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೇಯರ್ ಲಲಿತಾ ರವೀಶ್, ಉಪಮೇಯರ್ ಬಿ.ಎಸ್. ರೂಪಶ್ರೀ, ವಾರ್ಡ್ ಸದಸ್ಯೆ ಮಂಜುಳಾ ಆದೀಶ್ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ,‘ ಸ್ಮಾರ್ಟ್ ಸಿಟಿ ಯೋಜನೆಯ ಪ್ಯಾನ್ ಸಿಟಿ ಅಭಿವೃದ್ಧಿ ವಿಭಾಗದಲ್ಲಿ ನಗರದ 47ಕ್ಕೂ ಹೆಚ್ಚು ಉದ್ಯಾನಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇಂತಹ ಉದ್ಯಾನಗಳಲ್ಲಿ ಈ ಉದ್ಯಾನವೂ ಒಂದಾಗಿದೆ. ₹ 28 ಲಕ್ಷ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ವಾಕಿಂಗ್ ಪಾತ್, ಶೌಚಾಲಯ, ಸೌಂದರ್ಯೀಕರಣ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಸ್ಮಾರ್ಟ್ ಸಿಟಿಯಲ್ಲಿ ಮೊದಲು ಯೋಜನೆ ರೂಪಿಸಿದಾಗ ಒಂದೊಂದು ಉದ್ಯಾನಕ್ಕೆ ₹ 80 ಲಕ್ಷ ನಿಗದಿಪಡಿಸಿದ್ದರು. ಬಳಿಕ ಮಾರ್ಪಾಡು ಮಾಡಿ ಸಣ್ಣ ಉದ್ಯಾನಕ್ಕೆ ₹ 20, 25, 28 ಲಕ್ಷ, ದೊಡ್ಡ ಉದ್ಯಾನಕ್ಕೆ ₹ 45 ಲಕ್ಷ ಮೊತ್ತದಲ್ಲಿ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಆಯಾ ವಾರ್ಡಿನ ಸದಸ್ಯರೊಂದಿಗೆ ಚರ್ಚಿಸಿ ನಿರ್ದಿಷ್ಟ ಉದ್ಯಾನ ಅಭಿವೃದ್ಧಿಗೆ ಗುರುತಿಸಲಾಗಿದೆ. ಮೊದಲ ಹಂತದಲ್ಲಿ 10 ಉದ್ಯಾನಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿ ಆರಂಭಿಸಲಾಗುತ್ತಿದೆ’ ಎಂದು ತಿಳಿಸಿದರು.

ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, ಮುಖಂಡರಾದ ಆದೀಶ್, ವಾರ್ಡಿನ ಪ್ರಮುಖರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.