ತುಮಕೂರು: ಹಾವು ಕಡಿತಕ್ಕೆ ಒಳಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ರಂಗಯ್ಯನಪಾಳ್ಯದ ರೈತ ಚಿಕ್ಕವೀರಯ್ಯ (65) ಗುರುವಾರ ಮೃತಪಟ್ಟಿದ್ದಾರೆ.
ಜುಲೈ 31ರಂದು ಜಮೀನಿನಲ್ಲಿ ಜಾನುವಾರು ಕಟ್ಟಿಹಾಕಲು ಹೋದಾಗ ಹಾವು ಕಚ್ಚಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.