ಶನಿವಾರ, ನವೆಂಬರ್ 28, 2020
17 °C

ಸೌರದೀಪ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಇಲ್ಲಿನ ಮರಳೂರು ಇನ್ನರ್‌ವೀಲ್ ಕ್ಲಬ್‌ನಿಂದ ದುರ್ಗದಹಳ್ಳಿ ಮತ್ತು ಲಕ್ಷ್ಮಿಪುರ ತಾಂಡಾಗಳ ಜನರಿಗೆ ಸೌರದೀಪ ಮತ್ತು ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.

‘ಕ್ಲಬ್ ಈಗಾಗಲೇ ಗ್ರಾಮೀಣ ಜನರಿಗೆ ನೆರವಾಗುವ ದಿಕ್ಕಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಗ್ರಾಮಗಳ 20 ಮಂದಿಗೆ ಸೌರದೀಪವನ್ನು ವಿತರಿಸಲಾಗಿದೆ’ ಎಂದು ಕ್ಲಬ್ ಅಧ್ಯಕ್ಷೆ ಪ್ರಿಯಾ ಪ್ರದೀಪ್ ತಿಳಿಸಿದರು.

ದುರ್ಗದಹಳ್ಳಿಯ ವಿದ್ಯಾಶಂಕರ ದೇವಸ್ಥಾನದ ಬಳಿ ವಿವಿಧ ಜಾತಿಯ 50 ಹಣ್ಣಿನ ಸಸಿಗಳನ್ನು ಇದೇ ವೇಳೆ ನೆಡಲಾಯಿತು.

ಬೆಂಗಳೂರಿನ ಐಡಬ್ಲ್ಯುಸಿ ಅಧ್ಯಕ್ಷೆ ಪ್ರೇಮಾ ಅಯ್ಯರ್, ಕ್ಲಬ್ ಸದಸ್ಯರು ಹಾಗೂ ಗ್ರಾಮಸ್ಥರು
ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.