19ರಂದು ಕುಣಿಗಲ್‌ನಲ್ಲಿ ವಿಶೇಷ ಸತ್ಸಂಗ

ಶುಕ್ರವಾರ, ಮೇ 24, 2019
28 °C

19ರಂದು ಕುಣಿಗಲ್‌ನಲ್ಲಿ ವಿಶೇಷ ಸತ್ಸಂಗ

Published:
Updated:

ತುಮಕೂರು: ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮ ಹಾಗೂ ಕುಣಿಗಲ್ಲಿನ ರಾಮಕೃಷ್ಣ ಸತ್ಸಂಗ ಕೇಂದ್ರದ ಆಶ್ರಯದಲ್ಲಿ ಕುಣಿಗಲ್ಲಿನ ಐತಿಹಾಸಿಕ ದೊಡ್ಡಕೆರೆ ಏರಿಯ ಮೇಲಿರುವ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಮೇ 19ರಂದು ಸಂಜೆ 5.30ಕ್ಕೆ ಭಜನೆ ಹಾಗೂ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಶಾಸಕ ಡಾ.ಎಚ್.ಡಿ.ರಂಗನಾಥ್ ಉದ್ಘಾಟನೆ ಮಾಡುವರು. ತುಮಕೂರಿನ ರಾಮಕೃಷ್ಣ- ವಿವೇಕಾನಂದ ಆಶ್ರಮದ ಆಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಭಗವನ್ನಾಮ ಸಂಕೀರ್ತನೆ ಹಾಗೂ ವಿಶೇಷ ಪ್ರವಚನ ನೀಡುವರು. ಸ್ವಾಮಿ ಧೀರಾನಂದಜೀ ಮಹಾರಾಜ್ ಹಾಗೂ ಸ್ವಾಮಿ ಪರಮಾನಂದ ಓಂ ಅವರು ಪಾಲ್ಗೊಳ್ಳುವರು. ಡಿವೈಎಸ್ಪಿ ರಾಮಲಿಂಗೇಗೌಡ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !