ಕ್ರೀಡೆಯಿಂದ ಉತ್ತಮ ಆರೋಗ್ಯ: ಸಿದ್ಧಲಿಂಗ ಸ್ವಾಮೀಜಿ

7
ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯ ಸಮಾರಂಭ

ಕ್ರೀಡೆಯಿಂದ ಉತ್ತಮ ಆರೋಗ್ಯ: ಸಿದ್ಧಲಿಂಗ ಸ್ವಾಮೀಜಿ

Published:
Updated:
Deccan Herald

ತುಮಕೂರು: ಯುವಜನರು ಉತ್ತಮವಾದ ದೇಹದಾರ್ಢ್ಯ ಹೊಂದಲು ಮತ್ತು ಆರೋಗ್ಯವಂತರಾಗಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯ ಮತ್ತು ಸಿದ್ಧಗಂಗಾ ಮಹಿಳಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಸಿದ್ಧಗಂಗಾ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಬಡ್ಡಿ ಒಂದು ಸಾಂಪ್ರದಾಯಿಕ ದೇಶೀಯ ಕ್ರೀಡೆಯಾಗಿದೆ. ಇದು ಮೂಲತಃ ಭಾರತೀಯ ಕ್ರೀಡೆ. ತುಮಕೂರು ಜಿಲ್ಲೆ ಕಬಡ್ಡಿಯ ತವರೂರು. ಕೇವಲ ಪರುಷರಿಗೆ ಸೀಮಿತವಾಗಿದ್ದ ಈ ಕ್ರೀಡೆಯಲ್ಲಿ ಮಹಿಳೆಯರು ಭಾಗವಹಿಸುತ್ತಿರುವುದು ದೇಶದ ಪ್ರಗತಿಯ ಸಂಕೇತವಾಗಿದೆ ಎಂದರು.

ಇಂದು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಕ್ರೀಡೆಗಳಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿದೆ. ಇನ್ನು ಕೆಲವರಿಗೆ  ಮಾರ್ಗದರ್ಶನವಿದ್ದರೂ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಕ್ರೀಡೆಗಳಿಗೆ ಉತ್ತೇಜನ ನೀಡಲು ತುಮಕೂರಿನಲ್ಲಿ ಸ್ಪೋರ್ಟ್ಸ್ ಅಕಾಡೆಮಿ ಬೇಕಾಗಿದೆ. ಅದಕ್ಕೆ ಮಠ ಎಲ್ಲಾ ನೆರವನ್ನು ನೀಡಲಿದೆ ಎಂದು ತಿಳಿಸಿದರು.

ಉದ್ಘಾಟನೆ ಮಾಡಿದ ಹಿರಿಯ ಕ್ರೀಡಾಪಟು ಪ್ರೊ.ಜಿ.ಎಸ್.ಸೋಮಣ್ಣ ಮಾತನಾಡಿ, ’ದೇಶೀಯ ಕ್ರೀಡೆಗಳು ಅಳಿವಿನಂಚಿನಲ್ಲಿವೆ. ಅವುಗಳನ್ನು ಉಳಿಸಬೇಕಾದರೆ ಪಠ್ಯಕ್ರಮದಲ್ಲಿ ಅಳವಡಿಸಿ ಅವುಗಳಿಗೂ ಇತರ ವಿಷಯಗಳಿಗಿದ್ದಂತೆ ಪರೀಕ್ಷಾ ವ್ಯವಸ್ಥೆಯನ್ನು ಮಾಡಿದರೆ ಪರಿಸ್ಥಿತಿ ಸುಧಾರಿಸಬಹುದು’ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಡಿ.ಎನ್.ಯೋಗೀಶ್ವರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಕ್ರೀಡಾ ಪಟುಗಳಾದ ಮಹಮದ್ ಇಸ್ಮಾಯಿಲ್ ಲತೀಫ್, ಸುದೀಪ್‌ಕುಮಾರ್, ಎಸ್.ರಾಜಶೇಖರಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !