ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ನಗೆ ಬೀರಿದ ಕ್ರೀಡಾಳುಗಳು

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ
Last Updated 26 ಸೆಪ್ಟೆಂಬರ್ 2022, 16:33 IST
ಅಕ್ಷರ ಗಾತ್ರ

ತುಮಕೂರು: ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮೊದಲ ದಿನ ಅಥ್ಲೆಟಿಕ್‌ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದ್ದರು.

ನಗರದ ಎಸ್‌ಎಸ್‌ಐಟಿ ಕಾಲೇಜು ಆವರಣದಲ್ಲಿ ಓಟ, ಡಿಸ್ಕಸ್‌ ಥ್ರೋ ಸೇರಿದಂತೆ ವಿವಿಧ ಕ್ರೀಡೆಗಳು ನಡೆದವು. ತಾಲ್ಲೂಕು ಮಟ್ಟದಲ್ಲಿ ಜಯಗಳಿಸಿದ ಕ್ರೀಡಾಪಟುಗಳು ಗೆಲುವಿನ ನಿರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವರು ಗೆಲುವಿನ ನಗೆ ಬೀರಿದರು.

ವಿವಿಧ ಸ್ಪರ್ಧೆಗಳಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದವರ ವಿವರ.

100 ಮೀಟರ್‌ ಓಟ (ಬಾಲಕಿಯರ ವಿಭಾಗ): ತುಮಕೂರಿನ ಟಿ.ಪಿ. ಯುಕ್ತಾ, ಕುಣಿಗಲ್‌ನ ಎನ್‌.ತನುಶ್ರೀ, ಗುಬ್ಬಿಯ ಲಕ್ಷ್ಮಿ. 200 ಮೀಟರ್‌: ಟಿ.ಪಿ.ಯುಕ್ತಾ, ತಿಪಟೂರಿನ ಪ್ರಿಯಾಂಕಾ, ಚಿಕ್ಕನಾಯಕನಹಳ್ಳಿ ದುರ್ಗಮ್ಮ. 800 ಮೀಟರ್‌: ತಿಪಟೂರಿನ ಪೂಜಾ, ಶಿರಾ ವರಲಕ್ಷ್ಮಿ, ಕುಣಿಗಲ್‌ನ ವಾಣಿಶ್ರೀ. ಡಿಸ್ಕಸ್‌ ಥ್ರೋ: ತುಮಕೂರಿನ ಎಸ್‌.ಟಿ.ರಕ್ಷಿತಾ, ಶಿರಾ ಚಾಯಶ್ರೀ, ಕುಣಿಗಲ್‌ನ ಕೆ.ಎಸ್‌.ರಕ್ಷಿತಾ. ಜಾವೇಲಿನ್‌ ಎಸೆತ: ತುಮಕೂರಿನ ಜಿ.ಮೇಘನಾ, ಗುಬ್ಬಿಯ ಎಲ್‌.ರಕ್ಷಿತಾ, ಕುಣಿಗಲ್‌ನ ಸಿ.ಆರ್‌.ಸುಷ್ಮಾ ತೃತೀಯ ಬಹುಮಾನ ಪಡೆದರು.

100 ಮೀಟರ್‌, 200 ಮೀಟರ್‌ (ಬಾಲಕರ ವಿಭಾಗ): ಚಿಕ್ಕನಾಯಕನಹಳ್ಳಿ ಬಿ.ಜಿ. ಬಾಬು ಪ್ರಥಮ, ತುಮಕೂರಿನ ಆರ್‌. ಸುಚೇತನ್‌ ದ್ವಿತೀಯ ಸ್ಥಾನ ಪಡೆದುಕೊಂಡರು. ತುಮಕೂರಿನ ಗಣೇಶ್‌ ರಾಂಪುರ, ಕುಣಿಗಲ್‌ ಚೇತನ್‌ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

800 ಮೀಟರ್‌, 5 ಸಾವಿರ ಮೀಟರ್‌: ತುರುವೇಕೆರೆಯ ಅಭಿಷೇಕ್‌, ಪಾವಗಡ ಎಂ. ಪುನೀತ್‌ ಸಾಯಿ ಕ್ರಮವಾಗಿ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಮಧುಗಿರಿ ಎಚ್‌.ಆರ್‌. ವಿನಯ್‌, ತುಮಕೂರಿನ ಎಸ್‌. ನಿಖಿಲ್‌ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಶಿರಾದ ಶ್ರೀನಿವಾಸ್‌, ತುಮಕೂರಿನ ಟಿ.ಎಂ. ದೀಕ್ಷಿತ್‌, ಕೊರಟಗೆರೆಯ ಚೇತನ್‌ಕುಮಾರ್‌ ತೃತೀಯ ಬಹುಮಾನ ಪಡೆದರು.

ಎರಡು ವರ್ಷಗಳ ಕೋವಿಡ್‌ ನಂತರ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡಾಪಟುಗಳು, ತರಬೇತುದಾರರು, ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆ, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಬೋಧಕೇತರ ಸಂಘದ ಆಶ್ರಯದಲ್ಲಿಸೆ. 29ರ ವರೆಗೆ ಕ್ರೀಡಾಕೂಟ ನಡೆಯಲಿದೆ. ಮಂಗಳವಾರ ಬಾಕಿ ಉಳಿದ ಅಥ್ಲೆಟಿಕ್ಸ್‌ ಮತ್ತು ಬುಧವಾರ, ಗುರುವಾರ ಕಬಡ್ಡಿ, ಕೊಕ್ಕೊ, ವಾಲಿಬಾಲ್‌ ಪಂದ್ಯಗಳು ಜರುಗಲಿವೆ.

ಚಾಲನೆ: ಶಾಸಕ ಜ್ಯೋತಿ ಗಣೇಶ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್‌, ಕ್ರೀಡಾಕೂಟದ ಸಂಚಾಲಕ ಟಿ.ಆರ್. ಬಸವರಾಜು, ಪ್ರಾಂಶುಪಾಲರ ಸಂಘದ ಲಿಂಗದೇವರು, ಕೃಷ್ಣಮೂರ್ತಿ, ಮಹಾಲಿಂಗೇಶ್, ಗೋಪಾಲಕೃಷ್ಣ, ಬಸವರಾಜು, ಪ್ರದೀಪ್‍ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT