ಬುಧವಾರ, ಸೆಪ್ಟೆಂಬರ್ 18, 2019
23 °C
ಜಿಲ್ಲೆಯಾದ್ಯಂತ ಕೃಷ್ಣನ ದೇವಸ್ಥಾನಗಳಲ್ಲಿ ಕಾರ್ಯಕ್ರಮ, ಮಕ್ಕಳಿಗಾಗಿ ವೇಷ ಭೂಷಣ ಸ್ಪರ್ಧೆ

ಶ್ರೀಕೃಷ್ಣಜನ್ಮಾಷ್ಟಮಿ: ಕೃಷ್ಣಾವತಾರದಲ್ಲಿ ಮನ ಸೆಳೆದ ಮಕ್ಕಳು

Published:
Updated:
Prajavani

ತುಮಕೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು.

ಕೃಷ್ಣ ದೇವಸ್ಥಾನ, ಶಿಕ್ಷಣ ಸಂಸ್ಥೆಗಳಲ್ಲಿ, ಸಂಘ ಸಂಸ್ಥೆಗಳವತಿಯಿಂತ ಆಚರಣೆ ಮಾಡಲಾಯಿತು.

ದೇವಸ್ಥಾನಗಳಲ್ಲಿ ಪೂಜೆ, ಅಭಿಷೇಕ, ಅಲಂಕಾರ ಮಾಡಲಾಗಿತ್ತು. ದೇವಸ್ಥಾನಗಳಲ್ಲಿ ಕೃಷ್ಣನ ಮೂರ್ತಿ ಭಿನ್ನ ವಿಭಿನ್ನ ಅಲಂಕಾರ ಮಾಡಿದ್ದು, ವಿಶೇಷವಾಗಿತ್ತು. ಶಾಲೆ, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಮಕ್ಕಳಿಗಾಗಿ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಿದ್ದವು. ಅಲ್ಲದೇ ಅಂಗನವಾಡಿ ಕೇಂದ್ರದ ಮಕ್ಕಳಿಗೂ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಿದ್ದು ಗಮನ ಸೆಳೆಯಿತು.

ಪುಟಾಣಿ ಮಕ್ಕಳು ಒಬ್ಬರಿಗಿಂತ ಒಬ್ಬರು ಆಕರ್ಷಕವಾಗಿ ಕಂಡರು. ಒಂದೊಂದು ಮಗುವು ವಿಭಿನ್ನವಾಗಿ ನೋಡುಗರ ಮನಸೂರೆಗೊಂಡರು.

 ತುಮಕೂರಿನ ಬಾಲಭವನದಲ್ಲಿ ಶುಕ್ರವಾರ ಬೆಂಗಳೂರು ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ಧ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಮಕ್ಕಳು ರಾಧೆಕೃಷ್ಣ ವೇಷದಲ್ಲಿ ಗಮನ ಸೆಳೆದರು.

 

Post Comments (+)