ಮಂಗಳವಾರ, ಆಗಸ್ಟ್ 16, 2022
21 °C

ಅಂತಿಮ ಘಳಿಗೆ ಮತಸೆಳೆಯಲು ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ 36 ಗ್ರಾಮಪಂಚಾಯಿತಿಯ ಚುನಾವಣೆ ಮಂಗಳವಾರ ನಡೆಯಲಿದ್ದು, ಅಂತಿಮ ಘಳಿಗೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಮತ ಸೆಳೆಯುವ ತಂತ್ರದಲ್ಲಿ ನಿರತರಾಗುತ್ತಿದ್ದಾರೆ.

ಎಲೆ, ಅಡಿಕೆ, ದಕ್ಷಿಣೆ ನೀಡಿ ಕಾಲಿಗೆ ಬಿದ್ದು ಮತಯಾಚನೆ ಮಾಡುತ್ತಿದ್ದರೆ, ಯುವ ಸಮೂಹಕ್ಕೆ ಬಿರಿಯಾನಿ, ಬಾಡೂಟಗಳ ವ್ಯವಸ್ಥೆ ನಿರಂತರವಾಗುತ್ತಿದ್ದು ಭಾನುವಾರವೇ ಕಡೆದಿನವಾದ ಕಾರಣ ತಾಲ್ಲೂಕಿನಲ್ಲಿ ಕೋಳಿ ವ್ಯಾಪಾರ ಜೋರಾಗಿದೆ.

ಕಾರ್ತಿಕ ಮಾಸದಲ್ಲಿ ಮಾಂಸಾಹಾರ ಸ್ಥಗಿತಗೊಂಡಿದ್ದು, ಕಾರ್ತಿಕ ಮುಗಿದ ಸಮಯದಲ್ಲಿ ಚುನಾವಣೆ ಘೋಷಣೆಯಾದ ದಿನದಿಂದಲೇ ಕೋಳಿ ವ್ಯಾಪಾರ ಹೆಚ್ಚಾಗುತ್ತಿದ್ದು, ತಾಲ್ಲೂಕಿನಲ್ಲಿ 500 ಕೋಳಿ ಫಾರಂ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಕೋಳಿ ಅಂಗಡಿಗಳಿಗೆ ಬಿಡುವಿಲ್ಲದ ಕೆಲಸ ಎಂದು ಕೋಳಿ ವ್ಯಾಪಾರಿ ಕುಮಾರ್ ತಿಳಿಸಿದ್ದಾರೆ. ಕೆಲವೆಡೆಗಳಲ್ಲಿ ಮನೆ ಮನೆಗೆ ಬಿರಿಯಾನಿ ಪ್ಯಾಕೆಟ್ ಸರಬರಾಜಾಗಿದ್ದರೆ, ಮತ್ತೆ ಕೆಲವೆಡೆ ಕೋಳಿ ಮಾಂಸದ ಜತೆ ಒಂದು ಕೆ.ಜಿ. ಉಪ್ಪಿನ ಪ್ಯಾಕೆಟ್‌ಗಳನ್ನು ವಿತರಿಸುತ್ತಿರುವ ಅಭ್ಯರ್ಥಿ, ಉಪ್ಪನ ಋಣಕ್ಕಾಗಿಯಾದರೂ ಮತ ಹಾಕ್ಕುತ್ತಾರೆ ಎಂದು ಬೀಗುತ್ತಿದ್ದಾರೆ.

ಪಕ್ಷಾಧಾರಿತ ಚುನಾವಣೆ ಇಲ್ಲದಿದ್ದರೂ, ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದು, ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಅಡಿಪಾಯವಾಗುತ್ತಿರುವುದರಿಂದ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಮೂರು ಪಕ್ಷದ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಕೆಲವೆಡೆ ಕುಕ್ಕರ್ ಮತ್ತು ಬೆಳ್ಳಿ ದೀಪದ ಕಂಭ ವಿತರಿಸುತ್ತಿರುವ ಸುದ್ದಿ ತಿಳಿದು ಪೊಲೀಸರು ಹೋಗುವ ಸಮಯದಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು