ಗುರುವಾರ , ಡಿಸೆಂಬರ್ 5, 2019
26 °C
ವಾಲಿಬಾಲ್ ತಂಡದ ಆಯ್ಕೆಯಲ್ಲಿ ಅನ್ಯಾಯ

ಮುಖ್ಯ ಕಾರ್ಯದರ್ಶಿಗೆ ವಿದ್ಯಾರ್ಥಿನಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಇದ್ದರೂ ಆಯ್ಕೆ ಮಾಡದ ಕಾರಣ ನೊಂದ ವಿದ್ಯಾರ್ಥಿನಿಯೊಬ್ಬಳು, ‘ಅನ್ಯಾಯ ಮಾಡಿದ ಆಯ್ಕೆ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರಿಗೆ ಪತ್ರ ಬರೆದಿದ್ದಾಳೆ.

ಬೆಂಗಳೂರಿನ ಜಯನಗರದ ಮೌಂಟ್‌ ಕಾರ್ಮೆಲ್ ಕಾನ್ವೆಂಟ್ ವಿದ್ಯಾರ್ಥಿನಿ ಗ್ಲೋರಿ ಪ್ರಿನ್ಸಿಕಾ ಈ ವಿದ್ಯಾರ್ಥಿನಿ. ಕೈ ಬರಹದ ಮನವಿಯಲ್ಲಿ, ‘17 ವರ್ಷದೊಳಗಿನವರ ವಾಲಿಬಾಲ್ ತಂಡಕ್ಕೆ ನಾಯಕಿಯಾಗಿದ್ದು ನವೆಂಬರ್‌ನಲ್ಲಿ ಚಿತ್ರದುರ್ಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದೆ. ಆಯ್ಕೆ ಸಮಿತಿಯವರು ನನ್ನ ಬದಲು, ಪಂದ್ಯಾವಳಿಯಲ್ಲಿ ಆಡದ ವಿದ್ಯಾರ್ಥಿನಿಯನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಿದ್ದಾರೆ’ ಎಂದು ದಾಖಲೆ ಸಹಿತ ದೂರು ನೀಡಿದ್ದಾಳೆ.

ವಿಚಾರಣೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಜಂಟಿ ನಿರ್ದೆಶಕ ಅನಂತ್ ನಾಯಕ್ ಅವರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸ್ವೀಕರಿಸಿದ ವಿಜಯಭಾಸ್ಕರ್ ಸೂಚಿಸಿದ್ದಾರೆ.

ಪ್ರತಿಕ್ರಿಯಿಸಿ (+)