ಭಾನುವಾರ, ನವೆಂಬರ್ 17, 2019
20 °C

ಸೋಲಾರ್ ಪಾರ್ಕ್‌ನಲ್ಲಿ ಶಿಕ್ಷಣ ಸಚಿವರ ವಾಯುವಿಹಾರ

Published:
Updated:

ತುಮಕೂರು: ಪಾವಗಡ ತಾಲ್ಲೂಕಿನ ಎನ್.ಅಚ್ಚಮನಹಳ್ಳಿಯ ಶಾಲೆಯಲ್ಲಿ ವಾಸ್ತವ್ಯ ಹೂಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶುಕ್ರವಾರ ಸೋಲಾರ್ ಪಾರ್ಕ್‌ನಲ್ಲಿ ಬೆಳಗಿನ ಜಾವ ವಾಯುವಿಹಾರ ಮಾಡಿದರು.

ಬೆಳಗ್ಗೆ 5.30 ಕ್ಕೆ ಎದ್ದ ಸಚಿವರು ನಿತ್ಯಕರ್ಮಗಳನ್ನು ಮುಗಿಸಿ ಸರ್ಕಾರಿ ಜೀಪ್ ನಲ್ಲಿ ಸೋಲಾರ್ ಪಾರ್ಕ್‌ಗೆ ತೆರಳಿದರು. ಬಿಜೆಪಿಯ ಸ್ಥಳೀಯ ಮುಖಂಡರು ಮತ್ತು ಆಪ್ತ ಸಿಬ್ಬಂದಿಯೊಂದಿಗೆ ಪಾರ್ಕ್ ನಲ್ಲಿ ವಿಹಾರ ಮಾಡಿದರು.

ವಾಯು ವಿಹಾರದ ಬಳಿಕ ಶಾಲಾ ಅಂಗಳದಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಮಾತನಾಡುತ್ತ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು.

ಪ್ರತಿಕ್ರಿಯಿಸಿ (+)