ಮಂಗಳವಾರ, ಡಿಸೆಂಬರ್ 10, 2019
26 °C

ಲವಲವಿಕೆಯಲ್ಲಿ ಶಿವಕುಮಾರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತುಮಕೂರು: ವಿಶ್ರಾಂತಿ ಪಡೆಯುತ್ತಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಮಂಗಳವಾರ ಸ್ವಾಮೀಜಿ ಲವಲವಿಕೆಯಿಂದ ಇದ್ದರು.

ಬೆಳಿಗ್ಗೆ ಪೂಜೆ, ಉಪಾಹಾರ ಮುಗಿಸಿದರು. ಹಣ್ಣಿನ ರಸ ಸೇವಿಸಿ ಮತ್ತೆ ವಿಶ್ರಾಂತಿ ಪಡೆದರು. ಭಕ್ತರಿಗೆ ದರ್ಶನ ನೀಡುವ ಮಂಚದ ಬಳಿ ತೆರಳೋಣ ಎಂದು ಸ್ವಾಮೀಜಿ ಸಹಾಯಕರಿಗೆ ಸೂಚಿಸಿದರು. ಆಗ ‘ಎರಡು ದಿನ ಬಿಟ್ಟು ಹೋಗೋಣ’ ಎಂದಿದ್ದಕ್ಕೆ ಸಮ್ಮತಿ ವ್ಯಕ್ತಪಡಿಸಿದರು. ತ್ರಿಕಾಲ ಇಷ್ಟಲಿಂಗ ಪೂಜೆಯನ್ನು ಮುಂದುವರಿಸಿದ್ದಾರೆ.

‘ಈಗ ಜ್ವರ ಬಿಟ್ಟಿದೆ. ಆರೋಗ್ಯ ಚೆನ್ನಾಗಿದೆ. ವಿಶ್ರಾಂತಿಯ ದೃಷ್ಟಿಯಿಂದ ಇನ್ನೂ ಒಂದು ವಾರ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲ. ಅಚ್ಚರಿಯ ರೀತಿಯಲ್ಲಿ ಅವರು ಎಂದಿನ ರೀತಿಯಲ್ಲಿ ದಿನಚರಿಯಲ್ಲಿ ತೊಡಗಿದ್ದಾರೆ’ ಎಂದು ಸ್ವಾಮೀಜಿ ಸಹಾಯಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)