ಭಾನುವಾರ, ಡಿಸೆಂಬರ್ 15, 2019
21 °C

ಮಠಕ್ಕೆ ಬಂದ ಸ್ವಾಮೀಜಿ, ಭಕ್ತರಿಗೆ ಒಂದು ವಾರ ದರ್ಶನವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತುಮಕೂರು: ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸೋಮವಾರ ಮಧ್ಯಾಹ್ನ ಮಠಕ್ಕೆ ಮರಳಿದರು.

11 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆಯಾದರು. ಮಠಕ್ಕೆ ಬಂದ ಅವರನ್ನು ನಿಧಾನವಾಗಿ ಕಾರಿನಿಂದ ಇಳಿಸಲಾಯಿತು. ಸಹಾಯಕರು ಹಾಗೂ ಸ್ವಾಮೀಜಿ ಅವರ ನೆರವಿನಲ್ಲಿ ನಿಧಾನವಾಗಿ ಹಳೇ ಮಠದತ್ತ ಬಂದರು. ಸ್ವಾಮೀಜಿ ಅವರು ಮಠಕ್ಕೆ ಬರುವುದನ್ನು ತಿಳಿದ ಭಕ್ತರು ಅವರ ಬರುವಿಕೆಗಾಗಿ ಕಾಯುತ್ತಿದ್ದರು. ಆರೋಗ್ಯದ ದೃಷ್ಟಿ ಮತ್ತು ವಿಶ್ರಾಂತಿ ಪಡೆಯಬೇಕಾದ ಕಾರಣ ಒಂದು ವಾರ ಸ್ವಾಮೀಜಿ ಅವರ ದರ್ಶನ ಭಾಗ್ಯ ಭಕ್ತರಿಗೆ ಇರುವುದಿಲ್ಲ.

ಸ್ವಾಮೀಜಿ ಮಠಕ್ಕೆ ಬರುವುದು ಮಕ್ಕಳಲ್ಲಿಯೂ ಸಂಭ್ರಮಕ್ಕೆ ಕಾರಣವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು