ಸಿದ್ಧಗಂಗಾ ಶ್ರೀಗಳಲ್ಲಿ ಹೆಚ್ಚಿದ ಲವಲವಿಕೆ: ಆರೋಗ್ಯದಲ್ಲಿ ಚೇತರಿಕೆ

7

ಸಿದ್ಧಗಂಗಾ ಶ್ರೀಗಳಲ್ಲಿ ಹೆಚ್ಚಿದ ಲವಲವಿಕೆ: ಆರೋಗ್ಯದಲ್ಲಿ ಚೇತರಿಕೆ

Published:
Updated:
Deccan Herald

ತುಮಕೂರು: ಚೆನ್ನೈನ ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನಲ್ಲಿ ಶನಿವಾರ ಶಸ್ತ್ರಚಿಕಿತ್ಸೆಗೊಳಗಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಭಾನುವಾರ ಲವಲವಿಕೆಯಿಂದ ಇದ್ದಾರೆ.

ಎಂದಿನಂತೆಯೇ ಸ್ನಾನ, ಪೂಜೆ ಮಾಡಲು ಉತ್ಸುಕತೆ ತೋರಿದ್ದಾರೆ. ಮಲಗಿಕೊಂಡೇ ಇರುವುದು ಬೇಸರವಾಗುತ್ತಿದೆ ಎಬ್ಬಿಸಿ ಕುಳ್ಳಿರಿಸಿ ಎಂದಿದ್ದಾರೆ. ಮಠಕ್ಕೆ ಹೋಗೋಣ ಎಂದು ಹಠ ಮಾಡುತ್ತಿದ್ದಾರೆ.

‘ಶಸ್ತ್ರಚಿಕಿತ್ಸೆಯಾಗಿರುವುದರಿಂದ ನೀವು ಬೇಗ ಗುಣಮುಖರಾಗಬೇಕು. ಹಾಗಾಗಿ, ಒಂದೆರಡು ದಿನ ಪೂಜೆ ಬೇಡ ಎಂದು ಡಾ.ಮಹಮ್ಮದ್ ರೇಲಾ ಅವರು ಸ್ವಾಮೀಜಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸ್ವಾಮೀಜಿಯವರು ಆರೋಗ್ಯವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಸಿದ್ಧಗಂಗಾಮಠದ ಅಧ್ಯಕ್ಷ ಡಾ.ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಇನ್ನೂ ಮೂರ್ನಾಲ್ಕು ದಿನ ತೀವ್ರ ನಿಗಾ ಘಟಕದಲ್ಲಿ ಭಕ್ತರು ಸ್ವಾಮೀಜಿ ಅವರನ್ನು ಭೇಟಿ ಮಾಡುವುದನ್ನು ವೈದ್ಯರು ನಿರ್ಬಂಧಿಸಿದ್ದಾರೆ. ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ಸ್ವಾಮೀಜಿ ಮನವಿ ಮಾಡಿದ್ದಾರೆ.

‘ನೀವು 5 ವರ್ಷದ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದೀರಿ. ಈಗ 111 ವರ್ಷದ ಸ್ವಾಮೀಜಿ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದೀರಿ. ಇದೂ ಕೂಡಾ ದಾಖಲೆ ಆಗಬಹುದೇನೊ ನೋಡಿ ಎಂದು ಸುತ್ತೂರು ಶ್ರೀಗಳು ಡಾ.ಮಹಮ್ಮದ್ ರೇಲಾ ಅವರಿಗೆ ಹೇಳಿದರು. ಅದಕ್ಕೆ ಡಾ.ರೇಲಾ ಅವರು ಪ್ರತಿಕ್ರಿಯಿಸಿ ಇಲ್ಲ ನಾನು ಒಬ್ಬ ವೈದ್ಯನಾಗಿ ನನ್ನ ಕರ್ತ್ಯವವನ್ನು ಮಾಡಿದ್ದೇನೆ ಎಂದು ಸರಳ, ಸಜ್ಜನಿಕೆಯ ನುಡಿಗಳನ್ನಾಡಿದರು’ ಎಂದು ಸ್ವಾಮೀಜಿ ವಿವರಿಸಿದ್ದಾರೆ.

ಸಚಿವರ ಭೇಟಿ: ಶನಿವಾರ ರಾತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಆಸ್ಪತ್ರೆಗೆ ತೆರಳಿ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !