ಆಗಸ್ಟ್ 11 ರಿಂದ ವಿಜ್ಞಾನ ಕಾರ್ಯಾಗಾರ

7

ಆಗಸ್ಟ್ 11 ರಿಂದ ವಿಜ್ಞಾನ ಕಾರ್ಯಾಗಾರ

Published:
Updated:

ತುಮಕೂರು: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ನೆನಪಿನಲ್ಲಿ ನಡೆಯತ್ತಿರುವ ‘ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನ‘ದ ಅಂಗವಾಗಿ ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯವು ಇದೇ ಆಗಸ್ಟ್ 11, 12 ರಂದು ವಿಜ್ಞಾನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಜಿಲ್ಲಾ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ‘ವೈಜ್ಞಾನಿಕ ಸಮಾಜ, ಸಂಸ್ಕೃತಿ ಮತ್ತು ಮನೋಭಾವ’ ಕುರಿತು ಕಾರ್ಯಾಗಾರವನ್ನು ಶಿರಾದ ಗುಮ್ಮನಹಳ್ಳಿ ಗೇಟ್‌ನ ಡಾ.ರಾಮಮನೋಹರ ಲೋಹಿತಾ ಸಮತಾ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. ಐಐಎಸ್‌ಸಿ ವಿಜ್ಞಾನಿಗಳು ಮತ್ತು ವಿವಿಧ ವಿಷಯ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳಲಿದ್ದಾರೆ.

ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಸಂವಿಧಾನದ ಪ್ರಕಾರ ಮೂಲಭೂತ ಕರ್ತವ್ಯವಾಗಿದ್ದು, ಅದರ ಭಾಗವಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರು ಹೆಸರು ನೋಂದಾಯಿಸಿಕೊಂಡು ಭಾಗವಹಿಸಬಹುದು. ಯಾವುದೇ ಶುಲ್ಕವಿರುವುದಿಲ್ಲ.

ವಿಜ್ಞಾನಿಗಳು ಮತ್ತು ಶಿಬಿರಾರ್ಥಿಗಳ ನಡುವೆ ಮುಕ್ತ ಸಂವಾದಕ್ಕೆ ಅವಕಾಶ ಇರಲಿದೆ. ಮಾಹಿತಿಗೆ ವಿದ್ಯಾಲಯದ ಟ್ರಸ್ಟಿ ಪ್ರೊ.ರವಿವರ್ಮಕುಮಾರ್‌ ಅವರನ್ನು (ಮೊಬೈಲ್‌: 9485203090) ಸಂಪರ್ಕಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !