ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಇಲ್ಲದ ₹ 3 ಲಕ್ಷ ಜಪ್ತಿ

ಆಂಧ್ರಪ್ರದೇಶದ ವ್ಯಾಪಾರಿಯ ಹೊಸ ಕಾರು ವಶಕ್ಕೆ ಪಡೆದ ಪೊಲೀಸರು, ಬಿಜೆಪಿ ಮುಖಂಡನ ವಿರುದ್ಧ ಎರಡು ಪ್ರಕರಣ ದಾಖಲು
Last Updated 5 ಏಪ್ರಿಲ್ 2018, 5:50 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಬುಧವಾರ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಮೂರು ಪ್ರಕರಣಗಳು ದಾಖಲಾಗಿವೆ.

ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ  ತೆರೆದಿರುವ ಚೆಕ್‌ಪೋಸ್ಟ್‌ನಲ್ಲಿ ತಪಾಸಣಾಧಿಕಾರಿಗಳು ಆಂಧ್ರಪ್ರದೇಶದ ಅನಂತಪುರ ಪಟ್ಟಣದ ನಿವಾಸಿ ರಸಗೊಬ್ಬರ ವ್ಯಾಪಾರಿ ಶ್ರೀಧರ ಬಾಬು ಅವರು ಹೊಸ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ದಾಖಲೆ ಇಲ್ಲದ ₹ 3 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಕಾರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ನವಶಕ್ತಿ ಸಮಾವೇಶ’ ಪ್ರಯುಕ್ತ ಕಲ್ಯಾಣ ಮಂಟಪದ ಹೊರಗೆ ಅನುಮತಿ ಇಲ್ಲದೆ ಬಿಜೆಪಿ ಚಿಹ್ನೆವುಳ್ಳ ಬಂಟಿಂಗ್ಸ್‌ ಅಳವಡಿಸಲಾಗಿತ್ತು. ಜತೆಗೆ ಅಧಿಕಾರಿಗಳ ಎಚ್ಚರಿಕೆ ನಡುವೆಯೂ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಹೀಗಾಗಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಕ್ಷಿಪ್ರ ಕಾರ್ಯ ಪಡೆ (ಫ್ಲೈಯಿಂಗ್ ಸ್ಕ್ವಾಡ್) ತಂಡದ ಅಧಿಕಾರಿಗಳು ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಟಿ.ಚಂದ್ರಮೋಹನ್ ಅವರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT