ಮಂಗಳವಾರ, ಜೂನ್ 28, 2022
20 °C

ಶಿರಾ: ಮಲ್ಲಶೆಟ್ಟಿಹಳ್ಳಿ ಪಿಕಪ್, ಬ್ಯಾರೇಜ್ ವೀಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ‘ಚುನಾವಣೆಯಲ್ಲಿ ಸೋತರೂ ಅಧಿಕಾರಾವಧಿಯಲ್ಲಿ ಮಾಡಿರುವ ಕೆಲಸ ಗೆದ್ದಿದೆ. ಇದಕ್ಕೆ ಪಟ್ರಾವತನಹಳ್ಳಿಯಿಂದ, ಕಳ್ಳಂಬೆಳ್ಳ ಕೆರೆಗೆ ನೀರು ಹರಿದು ಬರುವ ಹಳ್ಳದಲ್ಲಿ ನಿರ್ಮಿಸಿರುವ ಬ್ಯಾರೇಜ್, ಪಿಕಪ್‌ಗಳು ಮಳೆಯಿಂದ ತುಂಬಿ ಹರಿಯುತ್ತಿರುವುದು ಸಾಕ್ಷಿಯಾಗಿದೆ’ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ, ಬಸರಿಹಳ್ಳಿ ಬಳಿ ಪಿಕಪ್, ಬ್ಯಾರೇಜ್ ವೀಕ್ಷಿಸಿ ಮಾತನಾಡಿದರು.

‘2008ರಲ್ಲಿ ಶಾಸಕನಾಗಿದ್ದ ಸಮಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಬ್ಯಾರೇಜ್, ಪಿಕಪ್, ಚೆಕ್ ಡ್ಯಾಂ ನಿರ್ಮಾಣಕ್ಕೆ ಅನುದಾನ ಕೇಳಿದಾಗ ಬಯಲು ಸೀಮೆಯಾದ ಶಿರಾದಲ್ಲಿ ಮಳೆಯೇ ಬರುವುದಿಲ್ಲ. ಅಲ್ಲೇಕೆ ಬ್ಯಾರೇಜ್, ಚೆಕ್‌ಡ್ಯಾಂ ಎಂದು ವ್ಯಂಗ್ಯವಾಗಿ ಮಾತನಾಡುವ ಪರಿಸ್ಥಿತಿ ಇತ್ತು. ಆದರೆ 2008 ರಿಂದ 2018ರ ಅವಧಿಯಲ್ಲಿ ₹300 ಕೋಟಿಗೂ ಹೆಚ್ಚು ಅನುದಾನ ತಂದು 120ಕ್ಕೂ ಹೆಚ್ಚು ಬ್ಯಾರೇಜ್, ಪಿಕಪ್, ಚೆಕ್ ಡ್ಯಾಂ ನಿರ್ಮಿಸಿದ ತೃಪ್ತಿ ಇದೆ. ಇದರಿಂದಾಗಿ ಅಂತರ್ಜಲ ವೃದ್ಧಿಸಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪಿ.ಅರ್.ಮಂಜುನಾಥ್, ಮುಖಂಡರಾದ ಸಂಜಯ್ ಜಯಚಂದ್ರ, ಬಾಲೇನಹಳ್ಳಿ ಪ್ರಕಾಶ್, ಚಂದ್ರಕಲಾ, ಕಾಳಯ್ಯ, ನಾರಾಯಣಪ್ಪ, ರಂಗಣ್ಣ, ಮಲ್ಲಯ್ಯ, ರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು