30 ಮಂದಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

7
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 12, ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 18 ಮಂದಿ ಆಯ್ಕೆ

30 ಮಂದಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Published:
Updated:

ತುಮಕೂರು: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿಭಾಗದ ತಲಾ 6 ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಮೂರು ವಿಭಾಗಗಳ ತಲಾ ನಾಲ್ಕು ಮಂದಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಿಕ್ಕನಾಯಕನಹಳ್ಳಿಯ ಕೆ.ಎಸ್.ಬಸವರಾಜು, ಗುಬ್ಬಿಯ ಎಚ್.ಎಸ್.ಉಮಾದೇವಿ, ಕುಣಿಗಲ್‌ನ ಕೆ.ಸಿ.ಬಸವರಾಜು, ತಿಪಟೂರಿನ ಕೆ.ಎಂ.ಶಿವಕುಮಾರ ಸ್ವಾಮಿ, ತುಮಕೂರಿನ ಎಚ್.ಜಯಕುಮಾರ್, ತುರುವೇಕೆರೆಯ ಎನ್‌.ಆರ್.ಅಫ್‌ಜಲ್ ಉನ್ನಿಸಾ, ಮಧುಗಿರಿ ತಾಲ್ಲೂಕಿನ ವೆಂಕಟರತ್ನಶೆಟ್ಟಿ, ಶಿರಾ ತಾಲ್ಲೂಕಿನ ರಂಗಸ್ವಾಮಯ್ಯ, ಪಾವಗಡದ ಬಿ.ನಾಗರಾಜು, ಕೊರಟಗೆರೆಯ ಎಸ್.ಆರ್.ಬಾಹುದ್ದೀನ್ ಸಾಹೇಬ್ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ: ಚಿಕ್ಕನಾಯಕನಹಳ್ಳಿಯ ಟಿ.ಎಂ.ಗಿರೀಶ್, ಗುಬ್ಬಿಯ ಎಂ.ಜಿ.ಗಂಗಾಧರ, ಕುಣಿಗಲ್‌ನ ಎಸ್.ಎಚ್.ಅಶ್ವತ್ಥಯ್ಯ, ತಿಪಟೂರಿನ ಬಿ.ಸಿ.ಮೂರ್ತಿ, ತುಮಕೂರಿನ ಗಂಗಣ್ಣ, ತುರುವೇಕೆರೆಯ ಶಿವಲಿಂಗೇಗೌಡ, ಕೊರಟಗೆರೆ ತಾಲ್ಲೂಕಿನ ಎಸ್.ವಿ. ರಂಗರಸಯ್ಯ, ಶಿರಾ ತಾಲ್ಲೂಕಿನ ಪಿ.ಸಿದ್ದಣ್ಣ, ಪಾವಗಡದ ಯಶವಂತರಾವ್, ಮಧುಗಿರಿಯ ಉಮಾಶಂಕರ್ ಆಯ್ಕೆಯಾಗಿದ್ದಾರೆ.

ಪ್ರೌಢಶಾಲೆ: ಚಿಕ್ಕನಾಯಕನಹಳ್ಳಿಯ ಎಂ.ಆರ್.ಜಯದೇವಯ್ಯ, ಗುಬ್ಬಿಯ ಜಿ.ರೇಣುಕಾ, ಕುಣಿಗಲ್‌ನ ಎಚ್.ಎಲ್.ಶಿವಲಿಂಗಯ್ಯ, ತಿಪಟೂರಿನ ಎಚ್.ಆರ್.ಮುರುಳೀಧರ್, ತುಮಕೂರಿನ ಕೃಷ್ಣಪ್ಪ, ತುರುವೇಕೆರೆಯ ಎಚ್.ಎಸ್.ಸತೀಶ್, ಮಧುಗಿರಿಯ ಎಂ.ಎನ್.ನರಸಿಂಹಮೂರ್ತಿ, ಶಿರಾ ತಾಲ್ಲೂಕಿನ ಚಂದ್ರಯ್ಯ, ಪಾವಗಡದ ಕೆ.ಜೆ.ಮಲ್ಲಿಕಾರ್ಜುನ ಹಾಗೂ ಕೊರಟಗೆರೆಯ ಎಸ್.ಟಿ.ಶಿವಕುಮಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇಂದು ಪ್ರದಾನ

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರಿಗೆ ಕೊರಟಗೆರೆಯಲ್ಲಿ ಹಾಗೂ ತುಮಕೂರು ಶೈಕ್ಷಣಿಕ ಜಿಲ್ಲೆಯ ಶಿಕ್ಷಕರಿಗೆ ಹೆಗ್ಗೆರೆಯ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಸೆ.5ರಂದು ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !