ಗುರುವಾರ , ಏಪ್ರಿಲ್ 15, 2021
20 °C

ಶಿಕ್ಷಕರ ಚುನಾವಣೆ: ಮಧ್ಯರಾತ್ರಿ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನಿರ್ದೇಶಕರ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆ ಬಿರುಸು ಪಡೆದುಕೊಂಡಿತ್ತು. ಮಧ್ಯರಾತ್ರಿ ಅಥವಾ ಬೆಳಗ್ಗಿನ ಜಾವದ ವೇಳೆಗೆ ಫಲಿತಾಂಶ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಸಾಮಾನ್ಯ ಕ್ಷೇತ್ರದ 20 ಸ್ಥಾನಗಳಿಗೆ 47 ಮಂದಿ ಹಾಗೂ ಮಹಿಳಾ ಮೀಸಲು 10 ಸ್ಥಾನಗಳಿಗೆ 20 ಶಿಕ್ಷಕಿಯರು ಸ್ಪರ್ಧಿಸಿದ್ದರು. ನೋಂದಾಯಿತ 1,478 ಶಿಕ್ಷಕರಲ್ಲಿ 1,402 ಮಂದಿ ಮತ ಚಲಾಯಿಸಿದ್ದಾರೆ. ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ನಂತರ ಎಣಿಕೆ ಆರಂಭವಾಗಿದೆ.

ಆರ್.ಪರಮೇಶ್ ಹಾಗೂ ತಿಮ್ಮೇಗೌಡ ಬಣದ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಧಿಕಾರ ಹಿಡಿಯಲು ಎರಡೂ ಬಣಗಳು ಸೆಣೆಸಾಟ ನಡೆಸಿವೆ. ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತ ಶಿಕ್ಷಕರು ಮತ ಚಲಾಯಿಸಿದರು. ಮತದಾನ
ನಡೆದ ನಗರದ ಎಲಿಮೆಂಟರಿ ಶಾಲೆ ಆವರಣ ಶಿಕ್ಷಕರಿಂದ ತುಂಬಿ ಹೋಗಿತ್ತು. ಸಾಕಷ್ಟು ಪ್ರತಿಷ್ಠೆ, ಪೈಪೋಟಿಯಿಂದಾಗಿ ಶಿಕ್ಷಕರ ಚುನಾವಣೆಯೂ ಗಮನ ಸೆಳೆದಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಮುನ್ನ ಶಿಕ್ಷಕರ ಅಂಗಳದಲ್ಲೂ ರಾಜಕೀಯ ಚಟುವಟಿಕೆಗಳು ಬಿರುಸುಪಡೆದುಕೊಂಡಿದ್ದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು