ತಾವರೆಕೆರೆ; ನಕಲಿ ವೈದ್ಯನ ಬಂಧನ

7

ತಾವರೆಕೆರೆ; ನಕಲಿ ವೈದ್ಯನ ಬಂಧನ

Published:
Updated:
Deccan Herald

ತುಮಕೂರು: ಶಿರಾ ತಾಲ್ಲೂಕು ತಾವರೆಕೆರೆ ಗ್ರಾಮದಲ್ಲಿನ ಶ್ರೀನಿವಾಸ್ ಕ್ಲಿನಿಕ್‌ನ ನಕಲಿ ವೈದ್ಯ ಕೃಷ್ಣಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಶಿರಾ ತಾಲ್ಲೂಕಿನ ನಿಜ್ಜಯ್ಯನಪಾಳ್ಯದವರಾಗಿದ್ದು, ತಾವರೆಕೆರೆಯಲ್ಲಿ ವಾಸವಿದ್ದಾರೆ.

ಕಳೆದ ಮೇ 24ರಂದು ತಾವರೆಕೆರೆಯ 60 ವರ್ಷದ ಶಿವಣ್ಣ ಅವರು ಜ್ವರ ಮತ್ತು ತಲೆ ನೋವಿಗೆ ಈ ನಕಲಿ ವೈದ್ಯನ ಬಳಿ ಚಿಕಿತ್ಸೆ ಪಡೆಯಲು ಹೋದಾಗ ಇಂಜೆಕ್ಷನ್ ಮಾಡಿದ್ದ.

ಇಂಜೆಕ್ಷನ್ ಮಾಡಿದ ಜಾಗದಲ್ಲಿ ಬೊಬ್ಬೆ ಎದ್ದು ಅಸ್ವಸ್ಥರಾದ ಕಾರಣ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬದವರು ಶಿವಣ್ಣ ಅವರಿಗೆ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಮೇ 25ರಂದು ಹೃದಯಾಘಾತದಿಂತ ಮೃತಪಟ್ಟಿದ್ದರು.

ಶಿವಣ್ಣ ಅವರ ಮಗ ರಾಘವೇಂದ್ರ ಅವರು ತಮ್ಮ ತಂದೆಗೆ ಮೊದಲು ಚಿಕಿತ್ಸೆ ನೀಡಿದ್ದ ಕೃಷ್ಣಯ್ಯ ವಿರುದ್ಧ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ನಕಲಿ ವೈದ್ಯ ನೀಡಿದ ಇಂಜೆಕ್ಷನ್‌ನಿಂದಲೇ ಶಿವಣ್ಣ ಮೃತರಾಗಲು ಕಾರಣ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಿದ್ದರಿಂದ ನಕಲಿ ವೈದ್ಯನನ್ನು ಆ.14ರಂದು ತಾವರೆಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !