ಗ್ರಾಮದ ಕುಂಬಿ ನರಸಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಗಿಡ ಕಡಿಯಲಾಗಿದೆ. ಅಕ್ಕಪಕ್ಕದ ಜಮೀನಿನವರು ಶನಿವಾರ ಬೆಳಿಗ್ಗೆ ಬಂದು ನೋಡಿದಾಗ ವಿಚಾರ ಗೊತ್ತಾಗಿದೆ. ನರಸಯ್ಯ 7 ವರ್ಷದ ಹಿಂದೆ 4 ಎಕರೆ ಜಮೀನಿನಲ್ಲಿ 1 ಸಾವಿರ ಗಿಡ ಹಾಕಿದ್ದರು. ಇದರಲ್ಲಿ 95 ಗಿಡಗಳನ್ನು ಕಡಿದು ಹಾಕಿದ್ದಾರೆ. ಈ ಕೃತ್ಯ ಎಸಗಿದವರು ಯಾರು ಎಂಬುವುದು ತಿಳಿದು ಬಂದಿಲ್ಲ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.