ತುಮಕೂರು: ಒಳಮೀಸಲಾತಿಗಾಗಿ ನಡೆದಿರುವ ಹೋರಾಟಕ್ಕೆ ಆದಿ, ಅಂತ್ಯ ಇಲ್ಲದಂತಾಗಿದೆ. ಇಂದಿಗೂ ಹೋರಾಟ ಮಾಡಬೇಕಾಗಿದೆ ಎಂದು ಮಾದಿಗ ದಂಡೋರ ಸಂಘಟನೆ ಮುಖಂಡ ಶಂಕರಪ್ಪ ವಿಷಾದಿಸಿದರು.

ನಗರದಲ್ಲಿ ಈಚೆಗೆ ಮಾದಿಗ ದಂಡೋರ, ಮಾದಿಗ ವಿದ್ಯಾರ್ಥಿ ಯುವ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಗುರು ಆದಿಜಾಂಬವ ಜಯಂತಿ, ಮಾದಿಗ ಸಮುದಾಯದ ಸಂತರ ಸ್ಮರಣೆ, 8ನೇ ಶೈಕ್ಷಣಿಕ ಜಾಗೃತಿ ಸಮಾವೇಶ, ಪ್ರತಿಭಾ ಪುರಸ್ಕಾರ, ಗ್ರಾಮಾಂತರ ಕ್ಷೇತ್ರದ ಜಾತಿ ಜನಗಣತಿ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ಸರ್ಕಾರಗಳು ನಮ್ಮನ್ನು ಉಪಯೋಗಿಸಿಕೊಂಡು ಬೀದಿಯಲ್ಲಿ ಬಿಟ್ಟಿವೆ. ಮೂರು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಒಳಮೀಸಲಾತಿ ಸಿಕ್ಕಿಲ್ಲ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಸಮುದಾಯ ಹೋರಾಟಕ್ಕೆ ಅಣಿಯಾಗುತ್ತಿದೆ ಎಂದರು.

ಶಾಸಕ ಬಿ.ಸುರೇಶ್ಗೌಡ, ‘ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಮಾದಿಗ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಹಿಂದೆ ಉಳಿದಿದ್ದಾರೆ. ಶಿಕ್ಷಣ ಪಡೆದು ಮುಂದೆ ಬರಬೇಕು’ ಎಂದು ಸಲಹೆ ಮಾಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಸಿ.ಕೃಷ್ಣಕಾಂತ್, ‘ಶಿಕ್ಷಣ ಜತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಬಡತನದಿಂದ ಹೊರಬರಲು ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದರು.

ವಿ.ವಿ ವಿಜ್ಞಾನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್.ಶ್ರೀನಿವಾಸ್, ‘ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಓದಿನತ್ತ ಗಮನ ಹರಿಸಬೇಕು’ ಎಂದು ತಿಳಿಸಿದರು.

ಪರಿಷತ್ನ ಪ್ರಮುಖರಾದ ಆರ್.ಪ್ರಕಾಶ್, ಬೇವಿನಹಳ್ಳಿ ಚೆನ್ನಬಸವಯ್ಯ, ಮಡಿವಾಳ ನಾರಾಯಣಸ್ವಾಮಿ, ಕಮಲಮ್ಮ, ವೆಂಕಟರತ್ನಮ್ಮ, ಮುಳುಕುಂಟೆ ರವೀಂದ್ರ, ಕಲ್ಲೂರು ಹುಚ್ಚಣ್ಣ, ಅರಸೀಕೆರೆ ವೆಂಕಟೇಶ್, ಮಸ್ಕಲ್ ಮಂಜುನಾಥ, ಹುಳಿಯಾರ್ ಮಂಜುನಾಥ್, ದುರ್ಗದಹಳ್ಳಿ ಶಿವಣ್ಣ ಉಪಸ್ಥಿತರಿದ್ದರು.

ಗ್ರಾಮಾಂತರದಲ್ಲಿ ಮಾದಿಗರ ಜನ ಸಂಖ್ಯೆ 48 ಸಾವಿರ

ತಾಲ್ಲೂಕಿನ 41 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾದಿಗ ಸಮುದಾಯದವರ ಸಮೀಕ್ಷೆ ಮಾಡಲಾಗಿದ್ದು ಒಟ್ಟು 48648 ಜನ ಸಂಖ್ಯೆ ಇದೆ. ಕೇವಲ 165 ಮಂದಿ ಮಾತ್ರ ಸರ್ಕಾರಿ ಉದ್ಯೋಗದಲ್ಲಿ ಇರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಮಾದಿಗ ವಿದ್ಯಾರ್ಥಿ ಯುವ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ವಿ.ರವಿವರ್ಮ ತಿಳಿಸಿದರು. 41 ಗ್ರಾ.ಪಂ ವ್ಯಾಪ್ತಿಯ 223 ಹಳ್ಳಿಗಳಲ್ಲಿ ಸಮುದಾಯದ ಜನರು ಇರುವುದನ್ನು ಕಾಣಬಹುದಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಮುದಾಯದ ಜನಗಣತಿ ಮಾಡಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.