ಗುರುವಾರ , ಫೆಬ್ರವರಿ 25, 2021
19 °C

ಶಾಲಾ ಬಾಗಿಲು ಮುರಿದ ಕರಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ತಾಲ್ಲೂಕಿನ ಮದ್ದಿಬಂಡೆ ಗ್ರಾಮದಲ್ಲಿ ಭಾನುವಾರ ರಾತ್ರಿ ಕರಡಿಗಳು ಸರ್ಕಾರಿ ಶಾಲೆ ಬಾಗಿಲು ಮುರಿದು ಸಾಮಗ್ರಿಗಳನ್ನು ಹಾಳು ಮಾಡಿವೆ.

ಗ್ರಾಮದ ಚಾಮುಂಡೇಶ್ವರಿ ದೇಗುಲದ ಬಳಿ ಎರಡು ಕರಡಿಗಳು ಅಲ್ಲಿದ್ದ ಕೆಲ ಸಾಮಗ್ರಿಗಳನ್ನು ನಾಶಪಡಿಸಿವೆ. ನಂತರ ಗ್ರಾಮದ ಸರ್ಕಾರಿ ಶಾಲೆಯ ಬಾಗಿಲು ಮುರಿದು ಒಳನುಗ್ಗಿವೆ. ಶಾಲೆಯಲ್ಲಿದ್ದ ಸಾಮಗ್ರಿಗಳನ್ನು ಹಾಳು ಮಾಡಿ ಬೆಳಗಿನ ಜಾವ ಸ್ಥಳದಿಂದ ನಿರ್ಗಮಿಸಿವೆ.

ಸಂಜೆಯಾದರೆ ಜಮೀನಿಗೆ ಹೋಗಲು ಭಯಪಡಬೇಕಿದೆ. ಹೊರವಲಯದ ಮನೆಗಳ ಜನತೆ ರಾತ್ರಿ ಮನೆಯಿಂದ ಹೊರಬರಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು