ಗುರುವಾರ , ಆಗಸ್ಟ್ 11, 2022
28 °C

ಗುಬ್ಬಿ ತಹಶೀಲ್ದಾರ್‌ ಬಿ. ಆರತಿ ಮನೆಯಲ್ಲಿ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತಹಶೀಲ್ದಾರ್  ವಸತಿ ಗೃಹದಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ಶನಿವಾರ ಹಾಡಹಗಲೇ ನಡೆದಿದೆ.

4ನೇ ಶನಿವಾರ ರಜೆಯ ಪ್ರಯುಕ್ತ ಗುಬ್ಬಿಯ ತಹಶೀಲ್ದಾರ್‌ ಬಿ.ಆರತಿ ಊರಿಗೆ ತೆರಳಿದ್ದರು. ಇದೇ ಸಮಯ ನೋಡಿಕೊಂಡ ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿದ್ದಾರೆ. ಮನೆಯಲ್ಲಿ ಯಾವೆಲ್ಲಾ ವಸ್ತುಗಳು ಮತ್ತು ಎಷ್ಟು ನಗದು ಕಳ್ಳತನವಾಗಿದೆ ಎಂಬುವುದರ ಕುರಿತು ಇನ್ನೂ ಮಾಹಿತಿ ತಿಳಿದು ಬಂದಿಲ್ಲ.

ಕಳ್ಳತನದ ವಿಷಯ ತಿಳಿದ ಕೂಡಲೇ ತಹಶೀಲ್ದಾರ್‌ ವಾಪಸ್‌ ಬರುತ್ತಿದ್ದು, ಅವರು ಬಂದ ನಂತರ ಸಂಪೂರ್ಣ ಮಾಹಿತಿ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು