ಸೋಮವಾರ, ಸೆಪ್ಟೆಂಬರ್ 16, 2019
27 °C

ನೋಟರಿ ಶೆಡ್ ಚಾವಣಿ ಕಳವು: ಕ್ರಮಕ್ಕೆ ವಕೀಲರ ಮನವಿ

Published:
Updated:

ತುಮಕೂರು: ಜಿಲ್ಲಾ ಕೋರ್ಟ್ ಆವರಣದಲ್ಲಿ ಭದ್ರತಾ ವ್ಯವಸ್ಥೆಯನ್ನ ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ವಕೀಲರಾದ ಕೆ.ಎಚ್.ಹರಿಕುಮಾರ್ ನೇತೃತ್ವದಲ್ಲಿ ಕೆಲ ವಕೀಲರು ಹೈಕೋರ್ಟ್ ನ್ಯಾಯಾಧೀಶ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಅಲೋಕ್ ಅರಾದೆ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

'ನಮ್ಮ ಮನವಿ ಮೇರೆಗೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೋರ್ಟ್ ಆವರಣದ ದಕ್ಷಿಣ ಭಾಗದಲ್ಲಿ ನೋಟರಿಗಳ ಕೆಲಸ ಕಾರ್ಯಕ್ಕೆ ಕುಳಿತುಕೊಳ್ಳಲು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಈ ಶೆಡ್ ಮೇಲಿನ ಚಾವಣಿ ಕಳವು ಮಾಡಲಾಗಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

’ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಪೊಲೀಸರು ಏನೂ ಕ್ರಮಕೈಗೊಂಡಿಲ್ಲ. ಆವರಣದಲ್ಲಿಟ್ಟಿದ್ದ ವಕೀಲ ಸ್ನೇಹಿತರ ಎರಡು ದ್ವಿಚಕ್ರವಾಹನಗಳ ಕಳವು ಆಗಿದೆ. ನೋಟರಿಗಳು ಬಯಲಿನಲ್ಲಿ ಕುಳಿತು ಕೆಲಸ ಮಾಡಬೇಕಾಗಿದೆ. ಕೂಡಲೇ ಈ ದಿಶೆಯಲ್ಲಿ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿಯಲ್ಲಿ ಕೋರಿದ್ದಾರೆ. 

Post Comments (+)