ಭಾನುವಾರ, ಮೇ 16, 2021
22 °C
ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್ ಸ್ಪಷ್ಟನೆ

ಕೆಸಿ ವ್ಯಾಲಿ ನೀರಿನಿಂದ ತೊಂದರೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ ತಾಲ್ಲೂಕಿನ ಲಕ್ಷ್ಮಿಸಾಗರ ಕೆರೆಗೆ ವಿಧಾನಸಭಾ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಭಾನುವಾರ ಭೇಟಿ ನೀಡಿ ಕೆಸಿ ವ್ಯಾಲಿಯಿಂದ ಹರಿಯುತ್ತಿರುವ ನೀರನ್ನು ವೀಕ್ಷಿಸಿದರು.

ಕೋಲಾರ: ‘ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಗೆ ಹರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ವಿಧಾನಸಭ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ತಾಲ್ಲೂಕಿನ ಲಕ್ಷ್ಮಿಸಾಗರ ಕೆರೆಗೆ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು.

‘ಇಷ್ಟು ದಿನ 100 ಎಂಎಲ್‌ಡಿ ನೀರು ಹರಿಯುತ್ತಿತ್ತು, ಈಗ ಶನಿವಾರದಿಂದ ಹೆಚ್ಚಾಗಿ 100 ಎಂಎಲ್‌ಡಿ ನೀರು ಬರುತ್ತಿದ್ದೆ. ಈಗ ಪಟ್ಟಾಗಿ ಒಟ್ಟು 200 ಎಂಎಲ್‌ಡಿ ನೀರು ಹರಿಯುತ್ತಿದ್ದು, ಮುಂದಿನ ದಿನಗಳಲ್ಲಿ 200 ಎಂಎಲ್‌ಡಿ ಬರುತ್ತದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

‘ಕೆಸಿ ವ್ಯಾಲಿ ಯೋಜನೆಗೆ ₨ 1,345 ಕೋಟಿ ವೆಚ್ಚ ಮಾಡುತ್ತಿದ್ದು, ಚಲ್ಲಘಟ್ಟ, ಬೆಳ್ಳಂದೂರು ಕೆರೆಯಿಂದ ಲಕ್ಷ್ಮಿಸಾಗರ ಕೆರೆತನಕ ಪೈಪ್‌ಲೈನ್ ಪೂರ್ಣಗೊಂಡಿದ್ದು, ಉಳಿದ ಸಣ್ಣ, ಪುಟ್ಟ ಕೆಲಸಗಳು ನವೆಂಬರ್ ಒಳಗೆ ಮುಗಿದು 200 ಎಂಎಲ್‌ಡಿ ನೀರು ಹರಿಸಲಾಗುವುದು’ ಎಂದು ಹೇಳಿದರು.

‘ಒಟ್ಟು 4 ಮೋಟಾರು ಸ್ಥಾಪನೆ ಮಾಡಲಾಗುತ್ತಿತ್ತು, ಸದ್ಯಕ್ಕೆ 2 ಮೋಟಾರು ಮಾತ್ರ ಚಾಲನೆಯಾಗುತ್ತಿದೆ. 126 ಕೆರೆಗಳಿಗೆ ನೀರು ಹರಿಸುವ ಕನಸು ನನಸಾಗಿದೆ. ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯುವ ರಾಜಕಾಲುವೆಗಳ ಒತ್ತುವರಿ ತೆರವುಗೊಳಿ ಸ್ವಚ್ಛಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೀರು ಹರಿಯುವ ಸಂದರ್ಭದಲ್ಲಿ ಅನಾಹುತಗಳು ಸಂಭವಿಸಿದರೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ’ ಎಂದು ಎಚ್ಚರಿಸಿದರು.

‘ಕೆಸಿ ವ್ಯಾಲಿ ಯೋಜನೆ ನೀರಿನಿಂದ ಯಾವುದೇ ತೊಂದರೆ ಸಂಭವಿಸುವುದಿಲ್ಲ. ಕೇವಲ ಅಂತರ್ಜಲ ವೃದ್ಧಿಗಾಗಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮಧ್ಯ ವ್ಯಕ್ತಿಗಳ ಮಾತು ರಕೇಳುವುದನ್ನು ರೈತರು ಬಿಡಬೇಕು. ಬತ್ತಿ ಹೋಗಿರುವ ಕೊಳವೆಬಾವಿಗಳು ಮರುಪೂರ್ಣಗೊಳ್ಳುತ್ತವೆ’ ಎಂದು ಹೇಳಿದರು.

‘ಕೊಳವೆಬಾವಿಗಳು ಮರುಪೂರ್ಣಗೊಂಡರೆ ರೈತರ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಜಿಲ್ಲೆಯನ್ನು ಹಸಿರುಮಯವನ್ನಾಗಿಸಲು ಸಂಕಲ್ಪ ಮಾಡಲಾಗಿದೆ. ಜಾಲಿ, ನೀಲಗಿರಿ ತೆಗೆದು ಉಪಯುಕ್ತ ಮರಗಳನ್ನು ಬೆಳೆಸಲು ರೈತರು ಮುಂದಾಗಬೇಕು’ ಎಂದು ಕೋರಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಮೇಶ್‌, ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು