ಸೋಮವಾರ, ಡಿಸೆಂಬರ್ 6, 2021
27 °C

ಅಗ್ರಿ ಟೂರಿಸಂ ಜಾರಿಗೆ ಚಿಂತನೆ: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ರಾಜ್ಯದಲ್ಲಿ ಅಗ್ರಿ ಟೂರಿಸಂ ಪ್ರಾರಂಭಿಸಿ ಕೃಷಿ ಸಂಸ್ಕೃತಿಯನ್ನು ತಿಳಿಸಿ ಪ್ರತಿಯೊಬ್ಬ ರೈತರನ್ನು ಗೌರವಿಸಿ ಉನ್ನತ ಸ್ಥಾನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ನಗರದ ಅಮಾನಿಕೆರೆಯನ್ನು ಸೌಂದರ್ಯೀಕರಣಗೊಳಿಸಲು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು.

‘ಪ್ರವಾಸೋದ್ಯಮ ಬಹಳ ದೊಡ್ಡ ಕ್ಷೇತ್ರ. ಕಲ್ಪನೆ ಮಾಡಿಕೊಂಡಂತೆಲ್ಲ ಕೆಲಸ ಮಾಡಬಹುದು. ನಾವು ಕಲ್ಪನೆ ಮಾಡಿಕೊಂಡಿದ್ದನ್ನು ಮುಟ್ಟಲು ಸಹ ಇಲ್ಲಿ ಸಾಧ್ಯವಿದೆ. ಆದ್ದರಿಂದ ಪ್ರವಾಸೋದ್ಯಮದಲ್ಲಿ ಕೆಲ ಬದಲಾವಣೆಗಳನ್ನು ತರಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆ ಜತೆಗೆ ಸಮಾಲೋಚನಾ ಸಭೆ ನಡೆಸಿ ಅಗ್ರಿ ಟೂರಿಸಂ ಮಾಡಲು ಚಿಂತನೆ ನಡೆಸಿದ್ದೇವೆ’ ಎಂದರು.

ಹಾಸ್ಯ ನಟ ನರಸಿಂಹರಾಜು ಭವನಕ್ಕೆ ₹2 ಕೋಟಿ ಹೆಚ್ಚುವರಿ ಹಣ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ನರಸಿಂಹರಾಜು ಭವನ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ತಹಶೀಲ್ದಾರ್ ಚಂದ್ರಶೇಖರ್, ಪೌರಾಯುಕ್ತ ಉಮಾಕಾಂತ್, ರಾಮಮೋಹನ್, ಪ್ರಸನ್ನ ಕುಮಾರ್, ಶಶಿಕಿರಣ್, ಡಾ.ಓಹಿಲಾ ಗಂಗಾಧರ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು