ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ಫ್ಲೆಕ್ಸ್‌ನಲ್ಲಿ ಗೋಡ್ಸೆ ಫೋಟೊ; ಮೂವರು ವಶಕ್ಕೆ

Last Updated 19 ಆಗಸ್ಟ್ 2022, 14:35 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜತೆಗೆ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಫೋಟೊ ಹಾಕಿ ಸಂಭ್ರಮಾಚರಣೆ ನಡೆಸಿ ವಿಕೃತಿ ಮೆರೆದಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಸಮೀಪದ ಡಿ.ಎಂ.ಬಡಾವಣೆ ನಿವಾಸಿಗಳಾದ ರಾಮಪ್ಪ, ಮುದ್ದುಕೃಷ್ಣ, ಲಕ್ಷ್ಮಣ ಅವರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಗೋಡ್ಸೆ ಫೋಟೊ ಹಾಕಿ ವಿಕೃತಿ ಮೆರೆದಿದ್ದರು.

ಆ. 15ರಂದು ಭಗತ್ ಸಿಂಗ್ ‘ಯೂಥ್ ಅಸೋಸಿಯೇಷನ್’ ಹೆಸರಿನಲ್ಲಿ ಹಾಕಿದ್ದ ಫ್ಲೆಕ್ಸ್‌ನಲ್ಲಿ ‘ಡಿ.ಎಂ.ಬಾಯ್ಸ್’ ಎಂದು ಬರೆದುಕೊಂಡು ಫ್ಲೆಕ್ಸ್ ಅಳವಡಿಸಿದ್ದರು. ಫ್ಲೆಕ್ಸ್‌ನಲ್ಲಿ ಗಾಂಧಿ ಫೋಟೋ ಮೇಲುಭಾಗದಲ್ಲಿ ಗೋಡ್ಸೆ ಫೋಟೊವನ್ನು ದೊಡ್ಡದಾಗಿ ಹಾಕಿ ಸಂಭ್ರಮಿಸಿದ್ದರು.

ಮೂವರನ್ನು ತಹಶೀಲ್ದಾರ್ ಎದುರು ಹಾಜರು ಪಡಿಸಲಾಯಿತು. ‘ನಮಗೆ ಗೋಡ್ಸೆ ಯಾರು ಎಂಬುದೇ ಗೊತ್ತಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಹುಡುಕಿದಾಗ ಸಿಕ್ಕ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಂಡು ಫ್ಲೆಕ್ಸ್ ಮಾಡಿಸಿ ಅಳವಡಿಸಿದ್ದೆವು. ತಪ್ಪಿನ ಅರಿವಾಗುತ್ತಿದ್ದಂತೆ ತಕ್ಷಣ ಫ್ಲೆಕ್ಸ್ ತೆರವುಗೊಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ತಹಶೀಲ್ದಾರ್ ಸುರೇಶ್ ಆಚಾರ್ ಅವರಿಗೆ ಮನವಿ ಮಾಡಿಕೊಂಡರು.

ಮುಂದಿನ ದಿನಗಳಲ್ಲಿ ಈ ರೀತಿ ಮಾಡಿದರೆ ₹5 ಲಕ್ಷ ದಂಡ ವಿಧಿಸುವುದಾಗಿ ಎಚ್ಚರಿಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT