ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ಬಲಿದಾನ ದಿನಕ್ಕೆ ತಿರಂಗ ರ‍್ಯಾಲಿ

Last Updated 24 ಮಾರ್ಚ್ 2021, 3:19 IST
ಅಕ್ಷರ ಗಾತ್ರ

ತಿಪಟೂರು: ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮರ ಜೀವನ, ತತ್ವ, ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ ತಿಳಿಸಿದರು.

ನಗರದ ಮುಖ್ಯ ರಸ್ತೆಗಳನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ಭಗತ್ ಸಿಂಗ್, ರಾಜಗುರು, ಸುಖದೇವ್‍ ಅವರನ್ನು ಗಲ್ಲಿಗೇರಿಸಿದ ಬಲಿದಾನ ದಿನದ ಅಂಗವಾಗಿ ತಿರಂಗ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಭಾರತದ ಸ್ವಾತಂತ್ರ್ಯಕ್ಕಾಗಿ ಯೌವನದಲ್ಲಿಯೇ ಭಾರತಾಂಬೆಯ ಪಾದಗಳಿಗೆ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಪ್ರತಿಯೊಬ್ಬರು ದೇಶದಿಂದ ಎನ್ನನ್ನು ಪಡೆಯಬೇಕು ಎಂದು ಆಲೋಚಿಸುವ ಸಮಯದಲ್ಲಿ ದೇಶಕ್ಕಾಗಿ ಏನನ್ನು ನೀಡಬೇಕು ಎಂದು ಆಲೋಚಿಸಿ ಖುಷಿಯಿಂದೇ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಮಹಾನ್ ಚೇತನರು ಎಂದರು.

ನಗರದ ಮುಖ್ಯರಸ್ತೆಯಲ್ಲಿ ಸುಮಾರು 150 ಮೀಟರ್ ಉದ್ದದ ಭಾರತ ತಿರಂಗ ಧ್ವಜ ರ‍್ಯಾಲಿ ನಡೆಸಲಾಯಿತು.

ಜಿಲ್ಲಾ ಸಂಚಾಲಕ ಶಶಿಕುಮಾರ್, ಕಾರ್ಯಕರ್ತರಾದ ಮನೋಜ್, ಸುಹಾಸ್, ಗುರುಕಿರಣ್, ಸ್ವರೂಪ್, ದರ್ಶನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT