ತಿಪಟೂರು: ತಾಲ್ಲೂಕು ಆಡಳಿತದಿಂದ ಆಡಳಿತ ಸೌಧದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಉಪ ವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಮಾತನಾಡಿ, ಅಂಬೇಡ್ಕರ್ ತಿಳಿಸುವಂತೆ ಜಗತ್ತಿನಲ್ಲಿರುವುದು ಒಂದೇ ಜಾತಿ ಅದು ಮನುಷ್ಯ ಜಾತಿ. ಎಲ್ಲರೂ ಒಂದೇ ಎಂಬ ಸೂತ್ರ ಪಾಲಿಸಬೇಕು. ಆಗ ಮಾತ್ರ ದೇಶ ಉದ್ಧಾರ ಸಾಧ್ಯ. ಜಾತಿ ಎಂಬುದು ಮನುಷ್ಯನ ಮನಸ್ಸಿನಲ್ಲಿರುವ ಒಂದು ಖಾಯಿಲೆ ಎಂದು ಅಂಬೇಡ್ಕರ್ ಪುಸ್ತಕದಲ್ಲಿ ಬರೆದಿದ್ದಾರೆ. ಮೇಲು, ಕೀಳು ಎಂಬುದು ಮನುಷ್ಯ ಅವರ ಸ್ವಾರ್ಥಕ್ಕೆ ಮಾಡಿಕೊಂಡಿರುವುದಷ್ಟೆ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಹಾಗೂ ಗೌರವ ನೀಡಲಾಗಿದೆ ಎಂದರು.

ಎಸ್ವಿಪಿ ಕಾಲೇಜಿನ ಪ್ರಾಂಶುಪಾಲ ರೇಣುಕಯ್ಯ ಮಾತನಾಡಿ, ಅಂಬೇಡ್ಕರ್ ಅವರ ವ್ಯಕ್ತಿತ್ವವು ಜ್ಞಾನಾಸಕ್ತಿ, ದೃಢ ಸಂಕಲ್ಪ, ಸಮಾನತೆಯ ನಂಬಿಕೆ ಮತ್ತು ಮಾನವೀಯತೆ ಎಂಬ ಮಹತ್ವದ ಮೌಲ್ಯಗಳನ್ನು ಒಳಗೊಂಡಿತ್ತು. ಅವರ ಸಾಧನೆಗಳು ಸಮುದ್ರದಂತಿದ್ದು, ಪ್ರತಿದಿನವೂ ಅದರಿಂದ ಜ್ಞಾನ ಪಡೆದುಕೊಳ್ಳಬೇಕು. ಭಾರತದ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಜ್ಞಾನದ ಮಹಾ ಸಾಗರವಾಗಿದ್ದರು ಎಂದರು.

ತಹಶೀಲ್ದಾರ್ ಮೋಹನ್ಕುಮಾರ್, ಡಿ.ವೈ.ಎಸ್.ಪಿ ಉಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಚ್.ಎಂ., ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ, ಗ್ರೇಡ್–2 ತಹಶೀಲ್ದಾರ್ ಜಗನ್ನಾಥ್ ಹಾಗೂ ಬಜಗೂರು ಮಂಜುನಾಥ್, ತಾರಾಮಣಿ, ತ್ರಿವೇಣಿ, ದೀಪಾ ಹೆಬ್ಬಳಿ, ಜಲಜಾಕ್ಷಮ್ಮ ಕಂರವಿಕುಮಾರ್, ಪುನೀತ್, ರಂಗಪ್ಪ, ಮಂಜುನಾಥ್, ಬಜುಗೂರು ಮಂಜುನಾಥ್, ಗೋವಿಂದರಾಜು, ಸುರೇಶ್, ನರಸಿಂಹಮೂರ್ತಿ, ರೇಣುಕಾರ್ಯ, ದಯಾನಂದ, ಅಂಜನಮೂರ್ತಿ, ಸಿದ್ದೇಶ್, ಶಂಕರ್, ಶಿವು ಉಗ್ರಯ್ಯ, ಚಂದ್ರಣ್ಣ, ಕೇಶವ, ರಂಗಾಪುರ ಶಂಕರಪ್ಪ, ಮೋಹನ್ ಬಾಬು, ದರ್ಶನ್ ಮೂರ್ತಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-17-750951651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.