ತಿಪಟೂರು: ‘ಸಮಾಜದ ನಡುವೆ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವ ಉಳಿಯಬೇಕು ಎಂಬುದು ನಮ್ಮ ಆಶಯ. ವಿವಿಧ ಸಂಘಟನೆಗಳು ಕರೆ ನೀಡಿರುವ ತಿಪಟೂರು ಬಂದ್ಗೆ ಮುಸ್ಲಿಂ ಸಮುದಾಯವೂ ಸಂಪೂರ್ಣ ಬೆಂಬಲ ನೀಡುತ್ತದೆ’ ಎಂದು ಜಾಮಿಯ ಮಸೀದಿ ಮುತುವಲ್ಲಿ ಹಾಜಿ ಸಲೀಂ ಪಾಷಾ ಹೇಳಿದರು.

ರಂಜಾನ್ ದಿನ ನಗರದ ಹೊರವಲಯದಲ್ಲಿ ಗೋವು ಸಾಗಣೆಗೆ ಘಟನೆಗೆ ಸಂಬಂಧಿಸಿ ಹಾಗೂ ಮಾವಿನ ತೋಪು ಅಂಜುಮಾನ್ ಶಾಲೆ ಕಟ್ಟಡ ನಿರ್ಮಾಣದ ಬಗ್ಗೆ ಮುತ್ತುವಲ್ಲಿಗಳು ಸೋಮವಾರ ಸುದ್ದಿಗೋಷ್ಠಿ ನಡೆಸಿದರು.

‘ಘಟನೆ ಸಂದರ್ಭದಲ್ಲಿ ಕೆಲ ಯುವಕರ ಮೇಲೆ ಹಲ್ಲೆ ನಡೆಸಿರುವವರು ನಮ್ಮ ಸಮಾಜದ ಕೆಲ ವ್ಯಾಪಾರಿಗಳು ಎಂದು ತಿಳಿದುಬಂದಿದೆ. ಯಾವುದೇ ರೀತಿಯ ಹಿಂಸಾತ್ಮಕ ಘಟನೆಗಳಿಗೆ ಸಮಾಜದ ಬೆಂಬಲವಿಲ್ಲ. ಕಾನೂನು ವಿರುದ್ಧ ನಡೆಯುವ ಘಟನೆಗಳನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲ. ಆದರೆ ಒಂದು ಘಟನೆ ಆಧಾರದ ಮೇಲೆ ಸಂಪೂರ್ಣ ಮುಸ್ಲಿಂ ಸಮುದಾಯವನ್ನು ದೂಷಿಸುವುದು ಸರಿಯಲ್ಲ’ ಎಂದರು.

ಮದೀನಾ ಮಸೀದಿ ಮುತ್ತುವಲ್ಲಿ ಮೊಹಮ್ಮದ್ ದಸ್ತಗೀರ್ ಮಾತನಾಡಿ, ‘ಶನಿವಾರ ರಂಜಾನ್ ಆಚರಿಸಿಕೊಂಡು ಬರುತ್ತಿದ್ದ ವೇಳೆ ಗಲಾಟೆ ಆಗುತ್ತಿದೆ ಎಂದು ವಿಚಾರಿಸಿದಾಗ ದನದ ವ್ಯಾಪಾರ ಮಾಡುವವರು ಹಲ್ಲೆ ಮಾಡಿದ್ದಾರೆ ಎಂದು ತಿಳಿಯಿತು. ವಿಡಿಯೋ ನೋಡಿದಾಗ ನಮ್ಮ ಸಮಾಜದ ಮೇಲೆ ಕಳಂಕ ಕೂರಿಸುವ ಪ್ರಯತ್ನ ನಡೆದಿದೆ. ಯಾರೋ ಕೆಲವರು ಮಾಡಿರುವ ಅಪರಾಧಕ್ಕೆ ಸಮಾಜದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬೇಡ. ಯಾರು ಅಪರಾಧ ಮಾಡಿದ್ದಾರೊ ಅವರಿಗೆ ಶಿಕ್ಷೆಯಾಗಲಿ’ ಎಂದರು.

ಬಿಲಾಲ್ ಮಸೀದಿ ಮುತ್ತುವಲ್ಲಿ ಜನಾಬ್ ಶಫಿವುಲ್ಲಾ ಶರೀಫ್ ಮಾತನಾಡಿ, ಕೋಮು ಸೌಹಾರ್ಧತೆಗೆ ತಿಪಟೂರು ಹೆಸರಾಗಿದೆ. ನಾವು ಯುಗಾದಿ ಆಚರಿಸುತ್ತೇವೆ, ಅದೇರೀತಿ ಹಿಂದೂಗಳು ನಮ್ಮ ಜತೆ ರಂಜಾನ್ ಆಚರಿಸುತ್ತಾರೆ. ಕೆಲವು ಕಿಡಿಗೇಡಿಗಳಿಂದ ಸಮಾಜಕ್ಕೆ ಕೆಟ್ಟಹೆಸರು ತರುವ ಪ್ರಯತ್ನ ನಡೆದಿದೆ. ಹಲ್ಲೆ ನಡೆಸಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಮಾಜದ ಪರವಾಗಿ ಮನವಿ ಮಾಡುತ್ತೇವೆ’ ಎಂದರು.

ಮಾವಿನ ತೋಪಿನಲ್ಲಿರುವುದು ಮಸೀದಿ ನಿರ್ಮಾಣ ಆಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದು ಮಸೀದಿ ಅಲ್ಲ, ಅಂಜುಮನ್ ಶಾಲೆ. 20ವರ್ಷದಿಂದ ಅಲ್ಲಿ ಶಾಲೆ ನಡೆಯುತ್ತಿದೆ. ದಾಖಲೆಯಲ್ಲಿಯೂ ಅದೇ ರೀತಿ ಇದೆ. ಆದರೆ ಅದನ್ನು ಮಸೀದಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಯಾರು ಬೇಕಾದರೂ ಹೋಗಿ ಪರಿಶೀಲಿಸಬಹುದು’ ಎಂದರು.

ಸೌಹಾರ್ದ ವೇದಿಕೆ ಅಲ್ಲಾಭಕಾಶ್, ರಸಿದಿಯಾ ಮುತುವಲ್ಲಿ ಬಾಬುಸಾಬ್, ರಹಮತುಲ್ಲಾ, ಮುತುವಲ್ಲಿ ಅಸ್ಲಾಂ ಪಾಷಾ, ಸಮಿಉಲ್ಲಾ ಖಾನ್, ಸೈಫುಲ್ಲ, ತನ್ವೀರುಲ್ಲಾ ಶರೀಫ್, ಮಹಮ್ಮದ್ ನದೀಮ್, ಸಯ್ಯದ್ ಶುಕೂರ್, ಸೈಪಿಲ್ಲಾ ಎಂ, ಮಹಮದ್ ಖಲೀಲ್, ಮಹಮ್ಮದ್ ನದೀಮ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-17-1526711454

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.