ತಿಪಟೂರು: ಕಾಯಕ ನಿಷ್ಠ ಸಮಾಜದಲ್ಲಿ ಯಾವುದೇ ಕಾಯಕವೂ ಕನಿಷ್ಠವಲ್ಲ. ಪ್ರತಿಯೊಬ್ಬರಿಗೂ ಸಮಾನ ಗೌರವ ದೊರಕಬೇಕು ಎಂಬ ಸಂದೇಶವನ್ನು ಬಸವಣ್ಣ ಸಾರಿದರು. ಎಲ್ಲ ಶರಣರೂ ಕಾಯಕ ನಿರತರಾಗಿ ನುಡಿದಂತೆ ನಡೆದು ವಚನ ಭಂಡಾರ ಸೃಷ್ಟಿಸಿದರು. ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ಣನ ಚಿಂತನೆ ಸಾರ್ವಕಾಲಿಕ ಸತ್ಯ ಎಂದು ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.

ತಾಲ್ಲೂಕಿನ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಆರ್.ಗುರುಸ್ವಾಮಿ ಈಡೇನಹಳ್ಳಿ ಪಾಳ್ಯದಲ್ಲಿ ಲಿಂ.ಪಿ.ಸಿ.ರಾಜಶೇಖರಯ್ಯ ಮತ್ತು ಲಿಂ.ಶಿವಗಂಗಮ್ಮ ಸ್ಮರಣಾರ್ಥ ದತ್ತಿ ಉಪನ್ಯಾಸ ಮತ್ತು ಶರಣ ಸಂಸ್ಕೃತಿ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಟೂಡ ಶಶಿಧರ್ ಮಾತನಾಡಿ, 900 ವರ್ಷಗಳ ಹಿಂದೆಯೇ ವೈದಿಕ ಸಂಸ್ಕೃತಿಯನ್ನು ವಿರೋಧಿಸಿ ವೈಚಾರಿಕ ಸಂಸ್ಕೃತಿಯನ್ನು ಬೆಳೆಸಿದ ಕೀರ್ತಿ ಬಸವಣ್ಣಗೆ ಸಲ್ಲುತ್ತದೆ. ಕಲ್ಯಾಣ ಕ್ರಾಂತಿಯ ನಂತರ 400 ವರ್ಷ ಅಜ್ಞಾತ ವಾಸದಲ್ಲಿದ್ದ ಶರಣ ಸಾಹಿತ್ಯ ಮತ್ತೆ ಮುನ್ನೆಲೆಗೆ ಬಂದಿದ್ದು, ವೈಚಾರಿಕ ಪ್ರಖರತೆಯನ್ನು ರೂಢಿಸಿಕೊಳ್ಳಬೇಕಿದ್ದ ಲಿಂಗಾಯತ ಧರ್ಮವು ವೈದಿಕ ಧರ್ಮಾಚರಣೆ, ಮೂಢನಂಬಿಕೆಗಳತ್ತ ಹಿಂದಕ್ಕೆ ಚಲಿಸದಂತೆ ಎಚ್ಚರ ವಹಿಸಬೇಕಿದೆ ಎಂದರು.

ಉದ್ಘಾಟಿಸಿ ಮಾತನಾಡಿದ ವಿ.ಎನ್.ಮಹದೇವಯ್ಯ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ತಾಲ್ಲೂಕಿನಾದ್ಯಂತ ಶರಣ ಸಂಸ್ಕೃತಿ ಪ್ರಸಾರ ಕಾಯಕವನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದೆ. ಮನೆಯ ಖಾಸಗಿ ಸಮಾರಂಭಗಳು ಶರಣ ಸಾಹಿತ್ಯ ಪ್ರಸಾರದ ವೇದಿಕೆಗಳಾಗುವುದು ಉತ್ತಮ ಬೆಳವಣಿಗೆ ಎಂದರು.

ಸಭೆಯಲ್ಲಿ ತಾಲ್ಲೂಕು ಶಸಾಪ. ಅಧ್ಯಕ್ಷ ಗುರುಸ್ವಾಮಿ, ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂಆರ್ ಸಂಗಮೇಶ್, ತಾಲ್ಲೂಕು ಶಸಾಪ ಗೌರವ ಅಧ್ಯಕ್ಷ ಎಚ್.ಎಸ್.ಜಗದೀಶಯ್ಯ, ನಿ.ನೌ.ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ, ಕಸಾಪ ಅಧ್ಯಕ್ಷ ಎಂ.ಬಸವರಾಜಪ್ಪ, ಎಚ್.ಎನ್. ಚಂದ್ರಶೇಖರ್, ಎಂ.ಡಿ. ಶಿವಕುಮಾರ್, ಎಚ್.ಜಿ. ನರಸಿಂಹಮೂರ್ತಿ, ಎಚ್.ಎಸ್. ಮಂಜಪ್ಪ, ಎಂಆರ್ ಸೋಮಶೇಖರ್ ಮಡೆನೂರು, ನಂ.ಶಿವಗಂಗಪ್ಪ, ಸುರಭಿ ನಿಶ್ಚಯ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-17-2146075175

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.