ತಿಪಟೂರು: ನಗರದ ತಾಲ್ಲೂಕು ಆಡಳಿತಸೌಧದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್ ಮೋಹನ್ಕುಮಾರ್ ಮಾತನಾಡಿ, ದೇವರ ದಾಸಿಮಯ್ಯ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮಹಾನ್ ವಚನಕಾರ. ಅವರ ಸಂದೇಶಗಳು ಸಮಾನತೆ, ಸತ್ಯ ಮತ್ತು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಎಂದು ತಿಳಿಸಿದರು.

ರಾಜ್ಯ ನಿರ್ದೇಶಕ ಎಚ್.ಎನ್.ರಂಗಸ್ವಾಮಿ ಮಾತನಾಡಿ, ದಾಸಿಮಯ್ಯ ಅವರ ಬಾಲ್ಯ ಜೀವನ ಹಾಗೂ ಅವರು ರಚಿಸಿದ ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಹತ್ವದ ಪಾತ್ರವಹಿಸಿವೆ. ವಚನ ಸಾಹಿತ್ಯಕ್ಕೆ ನೀಡಿದ ಅವರ ಅಮೂಲ್ಯ ಕೊಡುಗೆಯಿಂದ ‘ವಚನ ಬ್ರಹ್ಮ’ ಗೌರವಕ್ಕೆ ಪಾತ್ರರಾದರು ಎಂದರು.

ದೇವಾಂಗ ಸಮುದಾಯದ ಕೋಟೆನಾಯಕನಹಳ್ಳಿ ಪರಪ್ಪ, ಜಿ.ಆರ್.ಮಂಜುನಾಥ್, ತಾಲೂಕು ಅಧ್ಯಕ್ಷ ಎಂ.ಧನಂಜಯ್, ಬಿಜೆಪಿ ನಗರಾಧ್ಯಕ್ಷ ಎಚ್.ಆರ್.ಜಗದೀಶ್, ಹಿಂಡಿಸ್ಕೆರೆ ಪ್ರಕಾಶ್, ಕೋಟೆನಾಯಕನಹಳ್ಳಿ ಪ್ರಶಾಂತ್, ರಂಗಪ್ಪ ಜೀವನ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-17-887330347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.