ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್, ಶ್ರದ್ಧಾ ನೇತ್ರದಾನ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗದಿಂದ ಕಣ್ಣಿನ ಉಚಿತ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಶುಕ್ರವಾರ ನಡೆಯಿತು.

ಎಸ್.ಪಿ. ಕಿರಣ್ಕುಮಾರ್ ಮಾತನಾಡಿ, ಇಂದು ಗಾಳಿ, ನೀರು, ಔಷಧಿ, ಆಹಾರ, ಆಕಾಶ ಮತ್ತು ಭೂಮಿ ಕೂಡ ಕಲುಷಿತಗೊಂಡಿದ್ದ, ವಿಷಯುಕ್ತವಾಗಿದೆ. ಇಂದು ಬದುಕಿ ಉಳಿಯುವುದೇ ಈಗಿನ ಸವಾಲು ಎಂದು ವಿಷಾದ ವ್ಯಕ್ತಪಡಿಸಿದರು.

ವೆಂಕಟೇಶ್ ಮಾತನಾಡಿ, ಜಿಲ್ಲೆಯಾದ್ಯಂತ ತಿಂಗಳಿಗೆ ಸುಮಾರು 200ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ, ಹೊನ್ನವಳ್ಳಿ, ಬಿಳಿಗೆರೆ ಹಾಗೂ ತುರುವೇಕೆರೆಯ ದಬ್ಬೆಘಟ್ಟ, ದಂಡಿನ ಶಿವರ ಮಾಯಸಂದ್ರ ಭಾಗಗಳಲ್ಲಿ ಶಿಬಿರ ನಡೆಸಲಾಗು ತ್ತಿದೆ. ಮುಂದಿನ ದಿನಗಳಲ್ಲಿ ತಿಪಟೂರು ಹಳೇಪಾಳ್ಯ, ನೊಣವಿನಕೆರೆ, ರಂಗಾಪುರ ಭಾಗದಲ್ಲಿ ಶಿಬಿರ ಆರಂಭಿಸಲು ಯೋಚಿಸಲಾಗುತ್ತಿದೆ ಎಂದರು.

ಲಯನ್ ಎಸ್.ರೇಣುಕಾರಾಧ್ಯ, ಶ್ರದ್ಧಾ ಕಣ್ಣಿನ ಆಸ್ಪತ್ರೆಯ ಡಾ.ಶ್ರೇಯಾ ಪೈ, ತಿಪಟೂರು ಕೃಷ್ಣ, ಡಾ.ಮೋಹನಕುಮಾರಿ, ಲಯನ್ ಕುಸುಮಾ, ರಾಜು, ಸುಧಾಕರ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-17-1943858855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.