ತಿಪಟೂರು: ನಗರದ ಕೆ.ಎಲ್.ಎ. ಕಾನೂನು ಕಾಲೇಜಿನಲ್ಲಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ, ಸಾಹಿತ್ಯ ಜನಜೀವನದ ಗತಿಬಿಂಬ ಎಂಬ ಹೇಳಿಕೆಯಿದ್ದು, ಪ್ರಸ್ತುತ ಸಾಹಿತ್ಯ ಜೀವನದ ಗತಿಯನ್ನು ಪ್ರತಿಬಿಂಬಿಸದೆ ಜನಪ್ರಿಯ ಮತ್ತು ದ್ವೇಷ ಸಾಹಿತ್ಯದ ಹಿಂದೆ ಚಲಿಸುತ್ತಿರುವುದು ವಿಷಾದನೀಯ ಎಂದರು.

ಸಾಹಿತಿ ಟಿ.ಎಸ್.ನಾಗರಾಜಶೆಟ್ಟಿ ಮಾತನಾಡಿ, ಸಾಮಾಜಿಕ ಅಭಿವೃದ್ಧಿಯ ಹರಿಕಾರ, ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ನಾಡು, ನುಡಿ, ಸಂಸ್ಕೃತಿಗಳ ಅಭಿವೃದ್ಧಿಗೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಹುಟ್ಟು ಹಾಕಿದರು. ಪರಿಷತ್ತಿನ ಮೊದಲ ಅಧ್ಯಕ್ಷ ಎಚ್.ವಿ. ನಂಜುಂಡಯ್ಯ ಅವರಿಂದ ಪ್ರಾರಂಭವಾಗಿ ಇದುವರೆಗೆ ಪರಿಷತ್ ನಮ್ಮ ಭಾಷಾ ಬೆಳವಣಿಗೆಯಲ್ಲಿ,ಹಲವು ಕ್ಲಿಷ್ಟಕರ ಸಂದರ್ಭಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು.

ಕೆಎಲ್ಎ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಮಾತನಾಡಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಳೆದ ನಾಲ್ಕೈದು ವರ್ಷಗಳಿಂದ ಜನಮಾನಸಕ್ಕೆ ಹತ್ತಿರವಾಗುವಂತಹ ನೂರಾರು ಕಾರ್ಯಕ್ರಮಗಳನ್ನು ತಾಲ್ಲೂಕಿನಾದ್ಯಂತ ಆಯೋಜಿಸಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ತಾಲ್ಲೂಕು ಕಸಾಪ ಅಧ್ಯಕ್ಷ ಎಂ. ಬಸವರಾಜಪ್ಪ, ಯುವಕರು, ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪರಿಷತ್ತಿನ ಆಜೀವ ಸದಸ್ಯತ್ವ ಪಡೆಯುವ ಮೂಲಕ ನಾಡು, ನುಡಿಯ ಪ್ರಗತಿಯಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.

ತಾಲ್ಲೂಕಿನ ನಾಲ್ಕು ಹೋಬಳಿಗಳ ಅಧ್ಯಕ್ಷರಾದ ಎನ್.ಚನ್ನಬಸಪ್ಪ, ಪಿ.ಶಂಕರಪ್ಪ ಬಳ್ಳೆಕಟ್ಟೆ, ಎಚ್.ನಂದೀಶಪ್ಪ, ಎಚ್.ಎಸ್. ಓಂಕಾರಯ್ಯ ಅವರನ್ನು ಸತ್ಕರಿಸಲಾಯಿತು.

ಸಮಾರಂಭದಲ್ಲಿ ತಾಲ್ಲೂಖು ಕಸಾಪ ಕಾರ್ಯದರ್ಶಿ ಎಚ್.ಎಸ್.ಮಂಜಪ್ಪ, ಬಿ.ನಾಗರಾಜು, ಎಚ್.ಜಿ.ನರಸಿಂಹಮೂರ್ತಿ, ಆರ್ಥಿಕ ಸಮಾಲೋಚಕಿ ಪಿ.ರೇಖಾ, ಕೆ.ಸಿ..ಮಲ್ಲಿಕಾರ್ಜುನಯ್ಯ, ಟಿ.ಸಿ.ಗೋವಿಂದರಾಜು, ಅಡ್ವಿನ್ ಪ್ಯಾರಾ ಮಡಿಕಲ್ ಸಂಸ್ಥೆ ಕಾರ್ಯದರ್ಶಿ ಶಮಂತ ಎಚ್.ಎಸ್., ಪ್ರಾಂಶುಪಾಲ ಎಂ. ಡಿ. ಶಿವಕುಮಾರ್, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.