ತಿಪಟೂರು: ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಪರವಾನಗಿ ಪಡೆದ ಭೂಮಾಪಕರು ನಡೆಸುತ್ತಿರುವ ಮುಷ್ಕರದಿಂದ ಭೂಮಾಪನ ಇಲಾಖೆಗೆ ಸಂಬಂಧಿಸಿದ ರೈತರ, ಸಾರ್ವಜನಿಕರ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ.

ರೈತರ ಜಮೀನು ವ್ಯವಹಾರ, ನಿವೇಶನ ಖರೀದಿ, ಹಕ್ಕು ಬದಲಾವಣೆ, ಖಾತೆ ಬದಲಾವಣೆ ಹಾಗೂ ಸಾಲ ಸೌಲಭ್ಯಗಳ ಪ್ರಕ್ರಿಯೆಗಳು ಅಸ್ತವ್ಯಸ್ತಗೊಂಡಿದ್ದು, ರೈತರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 1,872 ಹದ್ದುಬಸ್ತು ಅರ್ಜಿಗಳು ಹಾಗೂ ಸುಮಾರು 1,500 ದರಕಾಸ್ತು ಅರ್ಜಿಗಳು, 300 ಇತರೆ ಅರ್ಜಿಗಳು ಬಾಕಿ ಉಳಿದಿವೆ. ಈ ಅರ್ಜಿಗಳನ್ನು ವಿಲೇವಾರಿ ಮಾಡಲು ಕೇವಲ ಇಬ್ಬರು ಭೂಮಾಪಕರನ್ನು ಮಾತ್ರ ನಿಯೋಜಿಸಿರುವುದು ರೈತರಿಗೆ ಸಂಕಷ್ಟ ಬಂದಿದೆ.

2 ಮಹಿಳೆಯರು ಮತ್ತು 21 ಪುರುಷರು ಸೇರಿದಂತೆ ಪರವಾನಗಿ ಪಡೆದ 23 ಭೂಮಾಪಕರು ಕಾರ್ಯ ನಿರ್ವಹಿಸುತ್ತಿದ್ದು, ಸೇವಾ ಭದ್ರತೆಗಾಗಿ ಮುಷ್ಕರ ಕೈಗೊಂಡಿರುವುದು ಅರ್ಜಿಗಳ ವಿಲೇವಾರಿಗೆ ತೊಂದರೆಯಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 20 ಸರ್ಕಾರಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 8 ಮಂದಿ ಕಚೇರಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದ 12 ಮಂದಿ ವಿವಿಧ ಕ್ಷೇತ್ರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಾದ ಆಕಾರ್ಬಂದ್ ಗಣೀಕೃತ ಕಾರ್ಯಕ್ಕೆ 4 ಮಂದಿ, ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆ (ಡ್ರೋನ್ ಸರ್ವೆ), ಇಬ್ಬರು, ಚೌಡ್ಲಾಪುರ ಅರಣ್ಯ ಪ್ರದೇಶದ ಸರ್ವೆ ಕಾರ್ಯಕ್ಕೆ ಇಬ್ಬರು, ದರಖಾಸ್ತು ಪೋಡಿ ಕಾರ್ಯಕ್ಕೆ ಇಬ್ಬರನ್ನು ನಿಯೋಜನೆ ಮಾಡಲಾಗಿದೆ. 1,872 ಅರ್ಜಿಗಳನ್ನು ವಿಲೇವಾರಿ ಮಾಡಲು ಇಬ್ಬರು ಭೂಮಾಪಕರನ್ನು ನಿಯೋಜಿಸಲಾಗಿದೆ.

ಸರ್ಕಾರದ ಮಾರ್ಗಸೂಚಿಯಂತೆ ಒಬ್ಬ ಭೂಮಾಪಕರು ತಿಂಗಳಿಗೆ ಸರಾಸರಿ 23 ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗಿದೆ. ಇಬ್ಬರು ಸೇರಿ ತಿಂಗಳಿಗೆ ಕೇವಲ 46 ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯ. ಈ ವೇಗದಲ್ಲಿ ಎಲ್ಲ ಅರ್ಜಿಗಳನ್ನು ಪೂರ್ಣಗೊಳಿಸಲು ಕನಿಷ್ಠ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುವ ಸಾಧ್ಯತೆಯಿದ್ದು ಇದಕ್ಕೆ ಹೆಚ್ಚುವರಿಯಾಗಿ, ಪ್ರತಿದಿನವೂ ಹೊಸ ಅರ್ಜಿಗಳು ನಾಡಕಚೇರಿಯಲ್ಲಿ ದಾಖಲಾಗುತ್ತಿದ್ದು, ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ.

ತತ್ಕಾಲ್ ಪೋಡಿ ಪ್ರಕ್ರಿಯೆಗೆ ಸರ್ಕಾರ ಒಂದು ತಿಂಗಳ ಅವಧಿ ನಿಗದಿಪಡಿಸಿದ್ದರೂ, ಪ್ರಾಯೋಗಿಕವಾಗಿ ಕಾರ್ಯಗತಗೊಳ್ಳುವಲ್ಲಿ ಅಡಚಣೆಗಳು ಎದುರಾಗುತ್ತಿವೆ.

ಭೂಮಾಪಕರು ಕೆಲಸಕ್ಕೆ ಹಾಜರಾಗದ ಹಿನ್ನೆಲೆ ಭೂಮಾಪನ, ಹದ್ದುಬಸ್ತು, ಸರ್ವೆ ಹಾಗೂ ಬ್ಯಾಂಕ್ ಸಾಲ ಪಡೆಯಲು ಅಗತ್ಯವಿರುವ 11ಇ ನಕ್ಷೆ, ಮನೆ ನಿರ್ಮಾಣ, ಕ್ರಯ, ವಿಭಾಗ, ದಾನಪತ್ರ, ವಾರಸುದಾರ ಹಕ್ಕು ಹಂಚಿಕೆ, ಜಮೀನು ಖರೀದಿ-ಮಾರಾಟ ಪ್ರಕ್ರಿಯೆಗಳೂ ಸೇರಿದಂತೆ ಪ್ರಮುಖ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅಗತ್ಯವಿರುವ ದಾಖಲೆಗಳ ಸಿದ್ಧತೆ ಕೂಡ ವಿಳಂಬವಾಗಿದ್ದು, ಜನರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗಿದೆ.

ಶುಲ್ಕದ ವಿವರಗಳ ಪ್ರಕಾರ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಕ್ಷೆ ಪಡೆಯಲು ₹800, ನಾಡಕಚೇರಿ ಮೂಲಕ 11ಇ ನಕ್ಷೆ ಪಡೆಯಲು ಮೊದಲ ಎರಡು ಎಕರೆಗೆ ₹1,500 ಹಾಗೂ ನಂತರ ಪ್ರತಿ ಎಕರೆಗೆ ₹400 ನಗರ ಪ್ರದೇಶಗಳಲ್ಲಿ ಮೊದಲ ಎರಡು ಎಕರೆಗೆ ₹2,500 ಹಾಗೂ ನಂತರ ಪ್ರತಿ ಎಕರೆಗೆ ₹400 ಶುಲ್ಕ ನಿಗದಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-17-888897423

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.