ತಿಪಟೂರು: ಸರ್ಕಾರಿ ನೌಕರರ ಸಂಘದ ಭವನದಲ್ಲಿ ನಗರ ಪೊಲೀಸ್ ಠಾಣೆಯಿಂದ ಜನ ಸಂಪರ್ಕ ಸಭೆ ಶನಿವಾರ ನಡೆಯಿತು.

ಸಭೆಯಲ್ಲಿ ಸಾರ್ವಜನಿಕರಿಂದ ಹೆಲ್ಮೆಟ್, ಪಾರ್ಕಿಂಗ್ ಅವ್ಯವಸ್ಥೆ, ವ್ಹೀಲಿ, ಸಂಚಾರ ದೀಪ ಅವ್ಯವಸ್ಥೆ ಹಾಗೂ ಗಾಂಜಾ ಸೇವನೆಯ ಬಗ್ಗೆ ದೂರು ಬಂದವು.

ಪಂಚ ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಮಡೆನೂರು ಕಾಂತರಾಜು ಮಾತನಾಡಿ, ‘ನಗರದಲ್ಲಿ ವಾಹನಗಳ ಪಾರ್ಕಿಂಗ್ ಸುವ್ಯವಸ್ಥೆಗಾಗಿ ಹಲವು ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ ಇಂದು ಅವ್ಯವಸ್ಥೆ ಹೆಚ್ಚಾಗಿದೆ. ನಗರಸಭೆ ಮುಂಭಾಗ ಹಾಗೂ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ವಾಹನಗಳು ರಸ್ತೆಬದಿಯಲ್ಲಿ ನಿಲ್ಲಿಸುವುದರಿಂದ ಬೇರೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸರಿಯಾದ ಮಾರ್ಗಸೂಚಿ ಅಳವಡಿಸಿ ನಗರದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಬೇಕು’ ಎಂದರು.

ಗಾಂಧಿನಗರದ ಫೈರೋಜ್ ಮಾತನಾಡಿ, ‘ರಂಗಾಪುರ ರಸ್ತೆಯಲ್ಲಿ ಗಾಂಜಾ ಸೇವನೆ ಮತ್ತು ಮಟ್ಕಾ ಹೆಚ್ಚಳವಾಗಿದ್ದು ರಸ್ತೆಬದಿಯಲ್ಲಿ ಮಧ್ಯರಾತ್ರಿ ಯುವಕರ ಗುಂಪುಗಾರಿಕೆ ನಡೆಯುತ್ತಿರುತ್ತದೆ. ಇಂದಿರಾ ನಗರದ ಬಳಿ ಹುಡುಗಿಯರನ್ನು ಚುಡಾಯಿಸುವುದು ಹೆಚ್ಚಳವಾಗಿದೆ. ಸಿಸಿ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಭೋವಿ ಕಾಲೋನಿಯ ಭಾಗದಲ್ಲಿ ಗುಜರಿ ವಾಹನಗಳನ್ನು ನಿಲ್ಲಿಸಿದ್ದಾರೆ, ಅವುಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡಿಸಬೇಕು’ ಎಂದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ‘ಸಂಚಾರ ದೀಪ ಪದೇ ಪದೇ ಕೆಟ್ಟು ಹೋಗುತ್ತಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿವೆ’ ಎಂದರು.

ಹಳೇಪಾಳ್ಯ ಶ್ರೀನಿವಾಸ್ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ರಾಮಶೆಟ್ಟಿಹಳ್ಳಿ, ಹುಚ್ಚಗೊಂಡನಹಳ್ಳಿ, ಮಂಜುನಾಥನಗರದ ಬಳಿಯ ಕಾಮಗಾರಿ ಅವ್ಯವಸ್ಥೆಯಿಂದ ಅಪಘಾತ ಸಂಭವಿಸಿ ಸಾವು ನೋವು ಉಂಟಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಿಲ್ಲ’ ಎಂದರು.

ಶಾರದನಗರ ಬೊರೆವೆಲ್ ಜಗದೀಶ್ ಮಾತನಾಡಿ, ‘ಶಾಲಾ ಸಮಯದಲ್ಲಿ ವಾಹನ ದಟ್ಟನೆ ಇರುವುದರಿಂದ ಶಾಲಾ ಕಾಲೇಜು ಗೇಟ್ ಬಳಿ ಬೆಳಗ್ಗೆ, ಸಂಜೆ ಪೊಲೀಸ್ ಸಿಬ್ಬಂದಿ ನಿಯೋಜನೆ ಅವಶ್ಯಕತೆಯಿದೆ ಎಂದರು.

ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್, ನಗರದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ನಗರಸಭೆ ಅಧಿಕಾರಿಗಳ ಜೊತೆ ಮಾತನಾಡಿ ಜಾಗ ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಹಂತ ಹಂತವಾಗಿ ರೈತರಿಗೂ ಹಾಗೂ ವಾಹನ ಸಂಚಾರಕ್ಕೂ ತೊಂದರೆಯಾಗದಂತೆ ನಿಗಾ ವಹಿಸಲಾಗುವುದು ಎಂದರು.

ಸಬ್ ಇನ್ಸ್ಪೆಕ್ಟರ್ ಯತೀಶ್, ಟಿ.ಕೆ.ಕುಮಾರ್, ಇಮ್ರಾನ್, ಕಿರಣ್, ಶಂಕರ ಮೂರ್ತಿ, ಶಾಂತಪ್ಪ, ಮಂಜುನಾಥ್, ಕಿಶೋರ್, ವಿದ್ಯಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-17-2040741113

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.