ತಿಪಟೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ನಡೆಯುತ್ತಿರುವ ರಾಗಿ ಖರೀದಿ ಕೇಂದ್ರದಲ್ಲಿ ದಾಸ್ತಾನು ಲೆಕ್ಕಾಚಾರದಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿರುವುದು ಬೆಳಕಿಗೆ ಬಂದಿದೆ.

ರಾಗಿ ಖರೀದಿ ಕೇಂದ್ರದಲ್ಲಿ ಎಫ್ಐಡಿ ವ್ಯವಸ್ಥೆ ಮೂಲಕ ನೋಂದಾಯಿತ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡುವ ವ್ಯವಸ್ಥೆ ಇದ್ದರೂ, ಕೆಲ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳು ನಿಯಮ ಮೀರಿ ಹಸ್ತಕ್ಷೇಪ ಮಾಡುತ್ತಿದ್ದು, ಮಧ್ಯವರ್ತಿಗಳು ರೈತರ ಹೆಸರಿನಲ್ಲಿ ರಾಗಿ ತಂದು, ಅಕ್ರಮವಾಗಿ ಗ್ರೀನ್ ವೋಚರ್ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

ರಾಗಿ ಖರೀದಿ ಅಧಿಕಾರಿ ರುದ್ರಪ್ಪ ಮಾತನಾಡಿ, ‘ಪ್ರತಿದಿನ ಕೆಲವು ಮಧ್ಯವರ್ತಿಗಳು ಕೇಂದ್ರಕ್ಕೆ ಬಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಒತ್ತಡ ಮತ್ತು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಒಬ್ಬನೇ ಅಧಿಕಾರಿ ಇರುವುದರಿಂದ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಗಮನಿಸಲು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು ನಂಬರ್ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್ಗಳನ್ನು ಬಳಸಿ ರಾಗಿ ಸಾಗಣೆ ಮಾಡುತ್ತಿದ್ದಾರೆ. ತೂಕ ಯಂತ್ರಗಳಲ್ಲಿ ಅಕ್ರಮ ಮಾಡುತ್ತಿದ್ದಾರೆ. ದಾಸ್ತಾನು ಲೆಕ್ಕದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ’ ಎಂದರು.

‘ತಿಪಟೂರು ರಾಗಿ ಕೇಂದ್ರದಲ್ಲಿ ಕಳೆದ ಒಂದೆರಡು ದಿನದಲ್ಲಿ 3,000 ಕೆ.ಜಿ ರಾಗಿ ವ್ಯತ್ಯಾಸ ಕಂಡು ಬಂದಿದೆ. ಈಗಾಗಲೇ ರಾಗಿ ದಾಸ್ತಾನು ಶೇಖರಣಾ ಮಳಿಗೆಗಳನ್ನು ಪರಿಶೀಲಿಸಲಾಗಿದೆ. ಮೇಲಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ’ ಎಂದರು.

ಕೆಲವು ಮಧ್ಯವರ್ತಿಗಳು ನಾಲ್ಕೈದು ಟ್ರ್ಯಾಕ್ಟರ್ ಮೂಲಕ ಒಂದೇ ಬಾರಿಗೆ ರಾಗಿ ತರುತ್ತಿದ್ದು, ಅವರಿಗೆ ಬೇಕಾದವರಿಗೆ ಗ್ರೀನ್ ವೋಚರ್ ಪಡೆಯುತ್ತಿದ್ದಾರೆ. ಕೆಲವು ದಲ್ಲಾಳಿಗಳು ಖರೀದಿ ಕೇಂದ್ರ ಪ್ರಾರಂಭದ ದಿನದಿಂದಲೂ ಇಲ್ಲಿ ಬರುತ್ತಿದ್ದು ಇಲ್ಲಿನ ಅಧಿಕಾರಿ ಹಾಗೂ ಮಧ್ಯವರ್ತಿಗಳ ಮಧ್ಯೆ ವ್ಯವಹಾರ ನಡೆಯುತ್ತಿವೆ. ಇವು ನಿಲ್ಲಬೇಕು ರೈತರಿಗೆ ನ್ಯಾಯ ದೊರೆಯಬೇಕು ರೈತ ಸಂಘಟನೆಯ ಸಿದ್ದಪ್ಪ ಬಳವನೇರಲು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-17-1255744259

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.