ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಮಾಟನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವೈಯಕ್ತಿಕ ಪರಿಹಾರ ನೀಡುವುದಾಗಿ ತಿಳಿಸಿದರು.

ಏಪ್ರಿಲ್ 19ರಂದು ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಣ್ಣ ತಿಮ್ಮಯ್ಯ ಮತ್ತು ವೆಂಕಟರಮಣೇಗೌಡ ಅವರ ಮನೆ ಬೆಂಕಿಗಾಹುತಿಯಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ವಿ. ಸೋಮಣ್ಣ ಎರಡು ಕುಟುಂಬಗಳಿಗೆ ತಲಾ ₹1.5 ಲಕ್ಷ ನೀಡುವುದಾಗಿ ತಿಳಿಸಿದರು.

ಕೋಟೆನಾಯಕನಹಳ್ಳಿ ಗ್ರಾಮದಲ್ಲಿ ನಡೆದ ಬನಶಂಕರಿ ರಥೋತ್ಸವ, ತಾಲ್ಲೂಕಿನ ಶಾರದನಗರ ಹಾಗೂ ಹೊನ್ನವಳ್ಳಿಯಲ್ಲಿ ಪ್ರಗತಿಯಲ್ಲಿರುವ ರೈಲ್ವೇ ಮೇಲ್ಸೇತುವೆ ಕಾಮಗಾರಿಗಳನ್ನು ಅಧಿಕಾರಿಗಳೊಡನೆ ವೀಕ್ಷಿಸಿ, ಗುರುಕುಲಾನಂದಶ್ರಮ ಹಾಗೂ ರಂಗಾಪುರ ಮಠಕ್ಕೆ ಭೇಟಿ ನೀಡಿದರು.

ತಹಶೀಲ್ದಾರ್ ಮೋಹನ್ ಕುಮಾರ್, ಸೋಮನಾಥ್ಗೌಡ, ಚಂದ್ರಶೇಖರ್, ಶಶಿಕಿರಣ್, ಆಯರಹಳ್ಳಿ ಶಂಕರಪ್ಪ, ಕೆರೆಗೋಡಿ ಸಂತೋಷ್, ರಾಮ್ ಮೋಹನ್, ಬಿಸಲೇಹಳ್ಳಿ ಜಗದೀಶ್, ಹರೀಸಮುದ್ರ ಗಂಗಾಧರ್, ಹುಣಸೇಘಟ್ಟ ಪ್ರಕಾಶ್, ಶಶಿಕಿರಣ್ ಹಸ್ತ, ನೊಣವಿನಕೆರೆ ರಾಕೇಶ್, ವಿಕಾಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-17-588235327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.