ತಿಪಟೂರು: ತಾಲ್ಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಹಾಗೂ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ನೂರಾರು ತೆಂಗು, ಅಡಿಕೆ, ಬಾಳೆ, ದಾಳಿಂಬೆ ಗಿಡ, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಗಾಳಿ ಸಹಿತ ಮಳೆಗೆ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಶುಕ್ರವಾರ ರಾತ್ರಿ ಹಾಗೂ ಶನಿವಾರ ದಿನವಿಡೀ ವಿದ್ಯುತ್ ಸ್ಥಗಿತಗೊಂಡಿತ್ತು. 15 ಸಾವಿರ ಬಾಳೆ, 500ಕ್ಕೂ ಹೆಚ್ಚು ತೆಂಗು, 50ಕ್ಕೂ ವಿದ್ಯುತ್ ಕಂಬಗಳು ಬಿದ್ದಿವೆ. ಹದಿನೈದಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಮಾದಿಹಳ್ಳಿಯ ಸಿದ್ದಲಿಂಗಪ್ಪ ಅವರ ತೋಟದಲ್ಲಿ ನೂರಕ್ಕೂ ಹೆಚ್ಚು ಫಲಭರಿತ ತೆಂಗಿನ ಮರಗಳು ನೆಲಕ್ಕೆ ಅಪ್ಪಳಿಸಿವೆ. ಬೆಣ್ಣನಹಳ್ಳಿಯ ಮಂಜುನಾಥ್, ಕಿರಣ್, ನಟರಾಜು ಅವರ ಆರು ಸಾವಿರ ಬಾಳೆ, ಅಂಚೆಕೊಪ್ಪಲು ಶಂಕರಪ್ಪ, ಘನಶ್ಯಾಂ ಅವರಿಗೆ ಸೇರಿದ ಆರು ಸಾವಿರ ಬಾಳೆ ಗಿಡ, ಗಿಡ್ಡಮ್ಮ ಅವರಿಗೆ ಸೇರಿದ ಸಾವಿರ, ಮತ್ತಿಹಳ್ಳಿ ಗೊಲ್ಲರಹಟ್ಟಿ ಬಸವರಾಜು ಅವರ ಸಾವಿರ, ಮತ್ತಿಹಳ್ಳಿ ರಮೇಶ್ ಎಂ.ಸಿ. ಅವರ ಇನ್ನೂರಕ್ಕೂ ಹೆಚ್ಚು ಫಲಭರಿತ ಹಾಗೂ ಗೊನೆ ಬರುವ ಸಮೀಪದ 20 ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕೆ ಉರಿಳಿವೆ.

ತಾಲ್ಲೂಕಿನ ಕಸಬಾ ಹೋಬಳಿ ಮತ್ತಿಹಳ್ಳಿ, ಗುರುಗದಹಳ್ಳಿ, ತಡಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೀಕೆರೆ, ಬೈರಾಪುರ, ಬಿದರೆಗುಡಿ, ಮಡೇನೂರು, ತಡಸೂರು, ಬೆಣ್ಣನಹಳ್ಳಿ, ಮತ್ತಿಹಳ್ಳಿ ಗೊಲ್ಲರಹಟ್ಟಿ, ಮಾದಿಹಳ್ಳಿ, ಸಣ್ಣೇನಹಳ್ಳಿ ಗ್ರಾಮಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಗಾಳಿಗೆ ನೂರಾರು ಎಕರೆ ಪ್ರದೇಶದಲ್ಲಿದ್ದ ಬಾಳೆ, ಅಡಿಕೆ, ತೆಂಗು, ತೇಗ, ಮಾವು, ಬೇವು, ದಾಳಿಂಬೆ ಬೆಳೆ ನೆಲಸಮವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ನಗರ ಪ್ರದೇಶದಲ್ಲಿ ರಸ್ತೆಗೆ ಮರಗಳು ಬಿದ್ದ ಪರಿಣಾಮ ರಾತ್ರಿ ಸಂಚಾರ ಅಸ್ತವಸ್ಯವಾಗಿದೆ. ಕೆಲ ಮಳಿಗೆಗಳ ಶೀಟ್ ಹಾರಿಹೋಗಿತ್ತು. ಮತ್ತಿಹಳ್ಳಿ ಗ್ರಾಮದಲ್ಲಿ 200 ವರ್ಷ ಹಳೆಯ ಬೃಹತ್ ಅರಳಿಮರ ನೆಲಕ್ಕೆ ಬಿದ್ದ ಪರಿಮಾಣ ಶುದ್ಧ ಕುಡಿಯುವ ನೀರಿನ ಘಟಕ, ದೇವಾಸ್ಥಾನ ಕಟ್ಟಡ ಮುರಿದಿದ್ದು, ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿದೆ.

ಬೆಸ್ಕಾಂ ಇಲಾಖೆ ಎಇಇ ಮನೋಹರ್ ನೇತೃತ್ವದ ತಂಡ ರಾತ್ರಿಯಿಂದಲೇ ಕಾರ್ಯಪ್ರವೃತ್ತರಾಗಿ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ, ಹೊಸದಾಗಿ ವಿದ್ಯುತ್ ಕಂಬ ಅಳವಡಿಸಿದರು.

ತಹಶೀಲ್ದಾರ್ ಮೋಹನ್ಕುಮಾರ್ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ತಂಡ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ನೇತೃತ್ವದ ನಾಲ್ವರ ತಂಡ ರೈತರ ತೋಟಕ್ಕೆ ಶನಿವಾರ ದಿನ ಪೂರ್ತಿ ಭೇಟಿ ನೀಡಿ ಪರಿಶೀಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-17-2013078914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.