ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಜೈಪುರ ರಸ್ತೆ ಸಮೀಪದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ನಗರದ ಗುಜರಿ ವ್ಯಾಪಾರಿ ಕೊಲೆ ನಡೆದಿದೆ.
.ತಿಪಟೂರು ನಗರದ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ .
ತಿಪಟೂರು ಗಾಂಧಿನಗರ ನಿವಾಸಿ ಮನ್ಸೂರ್ ಪಾಶ (31) ಕೊಲೆಯಾದವರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.

ಮಾರ್ಚ್ 4ರಂದು ವ್ಯಾಪಾರದ ನಿಮಿತ್ತ ಮನ್ಸೂರ್ ಪಾಶ ಹಳ್ಳಿಗಳ ಕಡೆಗೆ ತೆರಳಿದ್ದರು. ಸಂಜೆಯಾದರೂ ಮನೆಗೆ ಬಾರದ ಕಾರಣ ಅವರ ಕುಟುಂಬದವರು ಮೊಬೈಲ್ಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ತನಿಖೆ ನಡೆಸಿದ್ದು, ಗುರುವಾರ ರಂಗಾಪುರ– ಜೈಪುರ ರಸ್ತೆ ಸಮೀಪದ ಚಿಕ್ಕಕೊಟ್ಟಗಿಹಳ್ಳಿ ಬಳಿ ಮನ್ಸೂರ್ ಅವರಿಗೆ ಸೇರಿದ ಆಟೊ ರಿಕ್ಷಾ ಪತ್ತೆಯಾಗಿದೆ. ಅಲ್ಲಿಂದ ಸ್ವಲ್ಪ ದೂರದ ತೋಟದಲ್ಲಿ ಮನ್ಸೂರ್ ಪಾಶ ಶವ ಪತ್ತೆಯಾಗಿದೆ.
.ತಿಪಟೂರು: ಕೊಲೆ ಆರೋಪಿ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.